ಕುಷ್ಟಗಿ: ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವ ಹಿಂದುಳಿದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಮುಂದುವರಿಕೆಗಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಧಾರವಾಡದ ವಿದ್ಯಾಪೋಷಕ ಸ್ವಯಂ ಸೇವಾ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ಈ ವಿಷಯ ಕುರಿತು ಸೋಮವಾರ ಇಲ್ಲಿ ಸಂಸ್ಥೆಯ ಸ್ವಯಂ ಸೇವಕರಾದ ವೀರೇಶ ಬಂಗಾರಶೆಟ್ಟರ ಮತ್ತು ಅಮರೇಶ ಮುದೇನೂರು ಮಾಹಿತಿ ನೀಡಿದ್ದು, ಜೂನ್ 15ರೊಳಗೆ ಆನ್ಲೈನ್ (www.vidyaposhak.ngo) ಮೂಲಕ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಈ ವರ್ಷದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆದಿರುವ, ಪಿಯುಸಿ ವಾಣಿಜ್ಯ, ವಿಜ್ಞಾನ ವಿಭಾಗ ಮತ್ತು ಡಿಪ್ಲೊಮಾಕ್ಕೆ ಪ್ರವೇಶ ಪಡೆದಿರಬೇಕು. ಎಸ್ಎಸ್ಎಲ್ಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮತ್ತು ವಾರ್ಷಿಕ ₹1.20 ಲಕ್ಷ ಕ್ಕಿಂತ ಕಡಿಮೆ ವಾರ್ಷಿಕ ಕುಟುಂಬ ಆದಾಯ ಹೊಂದಿರುವವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದರ ಜತೆಗೆ ಅವರ ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು, ಅಗತ್ಯ ಗ್ರಂಥಾಲಯ ಸೇವೆ ಒದಗಿಸುವುದು ಮತ್ತು ಪ್ರತಿಭಾವಂತರಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ. ಬಡ ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸುವ ನಿಟ್ಟಿನಲ್ಲಿ ಸಂಸ್ಥೆ ಮುತುವರ್ಜಿ ವಹಿಸುತ್ತಿದೆ. ತಾಲ್ಲೂಕಿನ ಸುಮಾರು 25-30 ವಿದ್ಯಾರ್ಥಿಗಳಿಗೆ ಈ ಆರ್ಥಿಕ ನೆರವು ದೊರಕಲಿದೆ. ದಾನಿಗಳು, ಉದ್ಯಮಿಗಳ ಸಹಕಾರ ದೊರೆತರೆ ಈ ಅವಕಾಶವನ್ನು ಕೊಪ್ಪಳಕ್ಕೂ ವಿಸ್ತರಿಸುವ ಚಿಂತನೆಯಿದೆ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗೆ 8123191034 ಸಂಪರ್ಕಿಸಬಹುದು ಎಂದು ಹೇಳಿದರು. ಶ್ರೀಧರ ಘೋರ್ಪಡೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-35-1705745976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.