ಮಂಗಳೂರು: ಅಜಿತ್ ಪ್ರಭು ಫೌಂಡೇಷನ್ ವತಿಯಿಂದ 72 ವಿದ್ಯಾರ್ಥಿಗಳಿಗೆ ಒಟ್ಟು ₹42 ಲಕ್ಷ ವಿದ್ಯಾರ್ಥಿವೇತನವನ್ನು ನಗರದಲ್ಲಿ ಭಾನುವಾರ ವಿತರಿಸಲಾಯಿತು.

ಪ್ರಭು ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ವಿದ್ಯಾರ್ಥಿವೇತನ ಲೀಗ್ (ಜಿಎಸ್ಬಿಎಲ್) ಸಹಯೋಗದಲ್ಲಿ ಅಜಿತ್ ಪ್ರಭು ಫೌಂಡೇಷನ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ‘ಕ್ವೆಸ್ಟ್ ಗ್ಲೋಬಲ್’ನ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹನಾಧಿಕಾರಿ ಅಜಿತ್ ಪ್ರಭು, ‘ಶಿಕ್ಷಣವು ಬದುಕಿನಲ್ಲಿ ಮಹತ್ತರ ಬದಲಾವಣೆ ತರಬಲ್ಲುದು. ಜಗತ್ತಿನಲ್ಲಿ ಜ್ಞಾನವೇ ಶಕ್ತಿ. ಪದವಿ ಪಡೆದ ಬಳಿಕವೂ ಕಲಿಕೆ ನಿಲ್ಲಬಾರದು. ಜಾಸ್ತಿ ಜ್ಞಾನ ಸಂಪಾದಿಸಿದಷ್ಟೂ ಜಗತ್ತನ್ನು ಬೇರೆ ಬೇರೆ ಆಯಾಮದಲ್ಲಿ ನೋಡಲು ಸಾಧ್ಯ’ ಎಂದರು.

‘ಜೀವನದ ಅವಧಿ ತುಂಬಾ ಕಡಿಮೆ. ಬದುಕಿನ ಮಹತ್ವಾಕಾಂಕ್ಷೆಗಳನ್ನು ಕಾರ್ಯಗತಗೊಳಿಸಲು ಗರಿಷ್ಠ ಪ್ರಯತ್ನ ಮಾಡಬೇಕು. ನಾನು ಇದನ್ನು ಮಾಡಬಹುದಿತ್ತು ಎಂದು ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ. ಸಂಕಷ್ಟಗಳು ಆತಂಕಗಳು ಬದುಕಿನ ಭಾಗ. ಅವುಗಳನ್ನು ನಿಭಾಯಿಸುವುದನ್ನು ಕಲಿಯಬೇಕು. ನನ್ನ ಉತ್ತಮ ದಿನಗಳು ಇನ್ನಷ್ಟೇ ಬರಬೇಕಿದೆ ಎಂಬ ಗಾಢ ನಂಬಿಕೆಯು ಎಂತಹದ್ದೇ ಸಂಕಷ್ಟವನ್ನು ನಿರಾಯಾಸವಾಗಿ ಎದುರಿಸುವ ಸ್ಥೈರ್ಯ ತುಂಬಬಲ್ಲುದು’ ಎಂದರು.

ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ವೈಫಲ್ಯ ಎಂಬುದು ಇಲ್ಲವೇ ಇಲ್ಲ. ಪ್ರತಿಯೊಂದು ಏಳು ಬೀಳನ್ನು ಕಲಿಕೆಯ ಭಾಗವಾಗಿ ಸ್ವೀಕರಿಸಬೇಕು. ಭವಿಷ್ಯ ರೂಪುಗೊಳ್ಳುವುದು ವರ್ತಮಾನದಲ್ಲಿ. ವರ್ತಮಾನವನ್ನು ಚೆನ್ನಾಗಿ ನಿರ್ವಹಿಸುವ ಕಲೆ ಕರಗತವಾದರೆ ಭವಿಷ್ಯವೂ ಉತ್ತಮವಾಗಿಯೇ ಇರುತ್ತದೆ’ ಎಂದರು. ತಕ್ಕಮಟ್ಟಿನ ಅನುಭವ ಗಳಿಸಿದ ಬಳಿಕ ನವೋದ್ಯಮ ಸ್ಥಾಪನೆಗೆ ಮುಂದಾಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಅಜಿತ್ ಪ್ರಭು ಅವರ ತಾಯಿ ಶಾಲಿನಿ ಪ್ರಭು ಹಾಗೂ ಪತ್ನಿ ಬಬಿತಾ, ಪ್ರಭು ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಸುರೇಶ್ ವಿ. ಭಾಗವಹಿಸಿದ್ದರು.

‘ಕ್ವೆಸ್ಟ್ ಗ್ಲೋಬಲ್’ಗೆ ಆಯ್ಕೆಯಾದ 11 ಮಂದಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು. ಈ ಆಯ್ಕೆಯ ಮಾನದಂಡಗಳನ್ನು‘ಟ್ಯಾಲೆಂಟ್ ಅಕ್ವಿಸಿಷನ್’ ಉಪಾಧ್ಯಕ್ಷ ರವಳನಾಥ್ ವಿವರಿಸಿದರು.

ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು, ‘ಸ್ವಂತ ಕಾಲ ಮೇಲೆ ನಿಂತ ಬಳಿಕ ಇಬ್ಬರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತೇವೆ’ ಎಂಬ ಪ್ರತಿಜ್ಞೆ ಸ್ವೀಕರಿಸಿದರು. ಪ್ರಭು ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ನ ಕಾರ್ಯಕಾರಿ ವ್ಯವಸ್ಥಾಪಕಿ ಶ್ರೀದೇವಿ ವಿದ್ಯಾರ್ಥಿಗಳ ಪಟ್ಟಿ ಓದಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-29-316679048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.