ಮೈಸೂರು: ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜ್ಞಾನದ ಜೊತೆ ಸಂವಹನ ಕಲೆ ಹಾಗೂ ತಯಾರಿಯ ರೀತಿ ಪ್ರಾಮುಖ್ಯತೆ ಪಡೆಯುತ್ತದೆ. ವಿಷಯದ ಕುರಿತು ಮೂಲ ಮಾಹಿತಿ ಇದ್ದಾಗ ಯಶಸ್ಸು ಸಿಗುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ತಿಳಿಸಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಆಯೋಜಿಸಿರುವ ಕೆ– ಸೆಟ್ ಮತ್ತು ಯುಜಿಸಿ– ನೆಟ್ ಪರೀಕ್ಷೆಗಳ ತರಬೇತಿ ಉದ್ಘಾಟಿಸಿ ಮಾತನಾಡಿದರು.

‘ಜ್ಞಾನ ಬೆರಳ ತುದಿಯಲ್ಲಿದೆ, ಮಾಹಿತಿ ಕ್ಷಣಾರ್ಧದಲ್ಲಿ ದೊರೆಯುತ್ತದೆ. ಆದರೆ ತಂತ್ರಜ್ಞಾನದ ವೈಭವೀಕರಣದ ಭ್ರಮೆ ಸಲ್ಲದು. ಅದನ್ನು ಅರ್ಥಪೂರ್ಣವಾಗಿ ಬಳಸುವ ನಮ್ಮ ಚಾಣಾಕ್ಷತೆ ತೋರಬೇಕು. ಎಲ್ಲವನ್ನು ಕೃತಕ ಬುದ್ಧಿಮತ್ತೆ ಮಾಡುತ್ತದೆ ಎಂಬ ಅಸಡ್ಡೆ ತರಗತಿಗಳಲ್ಲಿ ಕಾಣಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಹೇಳಿದರು.

‘ಓದುವ, ಬರೆಯುವ ಹವ್ಯಾಸ ಕಡಿಮೆಯಾಗಿದೆ. ತಂತ್ರಜ್ಞಾನವು ಸಮಯ ನುಂಗುತ್ತಿದೆ. ಜ್ಞಾನಾರ್ಜನೆಗೆ ಓದು ಅಗತ್ಯ. ನಮ್ಮಲ್ಲಿನ ಕೀಳರಿಮೆ ತೆಗೆದು ಹಾಕಿ ಬೆಳೆಯಬೇಕು. ಯಾರೂ ಚಿನ್ನದ ತಟ್ಟೆಯಲ್ಲಿ ಅವಕಾಶ ಕೊಡುವುದಿಲ್ಲ, ನಮ್ಮ ಸ್ಥಾನಮಾನ ನಾವೇ ಪಡೆಯಬೇಕು. ಯುಜಿಸಿ, ನೆಟ್, ಕೆ– ಸೆಟ್, ಜೆಆರ್ಎಫ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಈ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸತ್ಯ ಶ್ರೀ ಆರ್ ಮಾತನಾಡಿ, ‘ಸಮಯದ ನಿರ್ವಹಣೆಯೇ ಯಶಸ್ಸಿನ ಮೆಟ್ಟಿಲು. ಪ್ರತಿಯೊಬ್ಬ ವ್ಯಕ್ತಿಗೂ ದಿನದ 24 ಗಂಟೆ ಸಮಾನವಾಗಿರುತ್ತವೆ. ಆದರೆ ಯಾರು ಆ ಸಮಯವನ್ನು ಶಿಸ್ತಿನಿಂದ ಬಳಸಿಕೊಳ್ಳುತ್ತಾರೋ, ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಮೊಬೈಲ್ ಮತ್ತು ಅನಗತ್ಯ ವಿಷಯಗಳಿಗೆ ಸಮಯ ವ್ಯಯಿಸದೆ, ತಮ್ಮ ಪಠ್ಯ ಮತ್ತು ಕೌಶಲದ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು’ ಎಂದು ಹೇಳಿದರು.

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಸಿ.ಎಸ್.ಆನಂದ್ ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎಂ. ರಾಮನಾಥಂ ನಾಯ್ದು, ಅಧ್ಯಯನ ವಿಭಾಗದ ಡೀನ್ ಎನ್.ಆರ್.ಚಂದ್ರೇಗೌಡ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-2001143034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.