ಮೈಸೂರು: ‘ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ವಿವಿಧ ಕೌಶಲಗಳನ್ನು ಕಲಿತುಕೊಳ್ಳಬೇಕು’ ಎಂದು ಪ್ರೊಸೆಟ್ಟಾಬಯೋ ಕಂಪನಿಯ ಸಂಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ವಿಜ್ಞಾನಿ ಧರ್ಮಪ್ರಸಾದ್ ಸಲಹೆ ನೀಡಿದರು.

ಇಲ್ಲಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ‘ಪ್ರಯೋಗ’ ಸಂಶೋಧನಾ ಮತ್ತು ಅಭಿವೃದ್ಧಿ ಕೋಶ, ವಾಣಿಜ್ಯ ಮತ್ತು ನಿರ್ವಹಣೆ, ಕಂಪ್ಯೂಟರ್, ಗ್ರಂಥಾಲಯ ಮತ್ತು ಕ್ರೀಡಾ ವಿಭಾಗಗಳ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ‘ಉತ್ತಮ ಪ್ರಪಂಚಕ್ಕಾಗಿ ತಂತ್ರಜ್ಞಾನ ಮತ್ತು ವ್ಯಾಪಾರ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಯಾವುದೇ ವಿಚಾರವಿರಲಿ, ಉತ್ತಮ ನಿರ್ಧಾರಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಎಲ್ಲರೂ ಪದವಿ ಪಡೆದುಕೊಳ್ಳುತ್ತಾರೆ. ಆದರೆ, ಕೆಲಸ ಕೊಡುವವರು ನಿಮ್ಮಲ್ಲಿ ವಿಶೇಷತೆ ಏನಿದೆ ಎಂದು ಹುಡುಕುತ್ತಾರೆ. ಹೀಗಾಗಿ, ಕೌಶಲಕ್ಕೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

ದುಬೈನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಬಾಲಮುರುಗನ್ ಬಾಲಸಾಮಿ ಆನ್ಲೈನ್ನಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಕೋಶಾಧಿಕಾರಿ ಬಿ.ಎಂ. ಪಾರ್ಥಸಾರಥಿ ಮಾತನಾಡಿದರು.

ನಂತರ ನಡೆದ ಗೋಷ್ಠಿಗಳಲ್ಲಿ ದಿಲ್ಮಾದ್ ಬೇಗಮ್, ಮಂಜು ಎಸ್.,ಮನೋಹರ್ ಎನ್., ಹೇಮಕುಮಾರ್ ಜಿ., ಕೆ. ಪ್ರಕಾಶ್, ಹರಿಪ್ರಸಾದ್ ಕೆ.ಎನ್., ರಾಜಕುಮಾರ್ ಟಿ. ಮಾಲಿಪಾಟೀಲ ಮಾತನಾಡಿದರು. ಸಮಾರೋಪದಲ್ಲಿ ಮಾತನಾಡಿದ ವಿಪ್ರಗನ್ ಬಯೋ ಸೆನ್ಸ್ ಸಂಸ್ಥಾಪಕ ಚಂದ್ರಶೇಖರ್ ಸಿದ್ದಮಾದಪ್ಪ, ‘ಯಶಸ್ಸಿಗೆ ಕಠಿಣ ಪರಿಶ್ರಮ ಪಡಬೇಕು. ತಾಳ್ಮೆ ಇರಬೇಕು’ ಎಂದರು.

ಪ್ರಾಂಶುಪಾಲರಾದ ಸೌಮ್ಯಾ ಈರಪ್ಪ ಕೆ. ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಮೃದುಲಾ ಸೋಜನ್ ವರದಿ ಮಂಡಿಸಿದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ.ಗುರುಮೂರ್ತಿ ಭಟ್, ಗ್ರಂಥಪಾಲಕಿ ಸಂಧ್ಯಾ ಆಚಾರ್ಯ, ದೈಹಿಕ ಶಿಕ್ಷಣ ವಿಭಾಗದ ನಾಗೇಂದ್ರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-85918686

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.