ಮೈಸೂರು: ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ(ವಿವಿಸಿಇ) ಭಾನುವಾರ ‘ಓಪನ್ ಡೇ 2026’ ಕಾರ್ಯಕ್ರಮ ನಡೆಯಿತು. ಎಂಜಿನಿಯರಿಂಗ್ ಶಿಕ್ಷಣ ಹಾಗೂ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ಒದಗಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಇನ್ಫೊಸಿಸ್ ಲಿಮಿಟೆಡ್ ಮೈಸೂರು ಸಹ ಉಪಾಧ್ಯಕ್ಷ ಸುಂದರ್ ಕೆ.ಎಸ್. ಮಾತನಾಡಿ, ‘ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹರಿಸುವವರು ಹಾಗೂ ವೃತ್ತಿಪರರಾಗಿ ಬೆಳೆಯಬೇಕು. ತಂತ್ರಜ್ಞಾನವನ್ನು ಎಂಜಿನಿಯರಿಂಗ್ ಹಾಗೂ ವ್ಯವಹಾರ ಜ್ಞಾನದೊಂದಿಗೆ ಸಂಯೋಜಿಸಬೇಕು. ಈಗಿನ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ನಿರಂತರವಾಗಿ ಹೊಸ ಕೌಶಲಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಕೈರೋಸೆಮಿ ಕಂಪನಿಯ ಹಿರಿಯ ಡಿಸೈನ್ ಎಂಜಿನಿಯರ್ ರವೀಂದ್ರ ವಿ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿರುವ ಉದ್ಯೋಗಾವಕಾಶ, ಕೈಗಾರಿಕಾ ಸಂಪರ್ಕದ ಬಗ್ಗೆ ವಿವರಿಸಿದರು.

ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಉದಯಶಂಕರ್, ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ, ಕಾಲೇಜು ಮತ್ತು ವಿಭಾಗ ಆಯ್ಕೆ ಬಗ್ಗೆ ಮಾರ್ಗದರ್ಶನ ನೀಡಿದರು.

ಪ್ರಾಂಶುಪಾಲ ಬಿ. ಸದಾಶಿವೇಗೌಡ ಮಾತನಾಡಿ, ‘ವಿವಿಸಿಇ ಬೋಧಕರ ಸಂಶೋಧನಾ ಲೇಖನ ಪ್ರಕಟಣೆಯಲ್ಲಿ ನಗರದಲ್ಲಿ ಪ್ರಥಮ ಸ್ಥಾನ, ಕರ್ನಾಟಕದಲ್ಲಿ 9ನೇ ಸ್ಥಾನ ಹಾಗೂ ದೇಶದ ಟಾಪ್ 300 ಸಂಸ್ಥೆಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದರು.

‘ಶುಲ್ಕ, ಅನುಭವಿ ಬೋಧಕ ವರ್ಗ, ಮೂಲ ಸೌಕರ್ಯ, ಸೆಂಟರ್ ಆಫ್ ಎಕ್ಸಲೆನ್ಸ್, ಕ್ರೀಡಾ ಸೌಲಭ್ಯ, ಮಾನ್ಯತೆ ಹಾಗೂ ಪೂರಕ ಚಟುವಟಿಕೆಗಳನ್ನು ಪರಿಗಣಿಸಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅರ್ಹ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ₹1.08 ಕೋಟಿ ಮೌಲ್ಯದ ವಿದ್ಯಾರ್ಥಿವೇತನ ನೀಡಲಾಗಿದೆ. ಕಲಿಕಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಕ್ಯಾಂಪಸ್ನಲ್ಲೇ ಕೆಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವು ವಿದ್ಯಾರ್ಥಿಗಳು ಓದುತ್ತಿರುವಾಗಲೇ ಅಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿಗಳಾದ ಪಿ. ವಿಶ್ವನಾಥ್, ಉಪ ಪ್ರಾಂಶುಪಾಲರಾದ ಶೋಭಾ ಶಂಕರ್, ಪ್ರಥಮ ವರ್ಷದ ಶೈಕ್ಷಣಿಕ ವ್ಯವಹಾರಗಳ ಡೀನ್ ಜಿ.ವಿ. ನವೀನ್ಪ್ರಕಾಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-39-243034485

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.