ನಾಯಕನಹಟ್ಟಿ: ಎಸ್ಎಸ್ಎಲ್ಸಿ ನಂತರ ವಿದ್ಯಾರ್ಥಿಗಳು ನುರಿತ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದರೆ ಭವಿಷ್ಯದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಬೆಂಗಳೂರಿನ ಶೈಕ್ಷಣಿಕ ಕೌಶಲ ಸಲಹೆಗಾರ ಟಿ. ದಿಲೀಪ್ಕುಮಾರ್ ಹೇಳಿದರು.

ಪಟ್ಟಣದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ‘ಎಐ ಯುಗದಲ್ಲಿ ಎಸ್ಎಸ್ಎಲ್ಸಿ ನಂತರ ಮುಂದೇನು’ ಎಂಬ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾಹಿತಿ ತಂತ್ರಜ್ಞಾನ ಮತ್ತು ಜೀವ ತಂತ್ರಜ್ಞಾನದ ನಂತರ ಇದೀಗ ಎಲ್ಲೆಡೆ ಕೃತಕ ಬುದ್ಧಿಮತ್ತೆ(ಎಐ) ವ್ಯಾಪಿಸುತ್ತಿದೆ. ಮುದ್ರಣ, ಪತ್ರಿಕೆ, ಕಾರ್ಖಾನೆ, ಸಾಗಾಣಿಕೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇದರ ಪ್ರಭಾವವನ್ನು ಕಾಣಬಹುದು. ಇದು ಪೂರಕ ಅಥವಾ ಮಾರಕ ಎನ್ನುವುದು ಮುಖ್ಯವಲ್ಲ. ಇದರಿಂದ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ ಎಂದರು.

ಬ್ಯಾಚುಲರ್ ಆಫ್ ಕಾರ್ಡಿಯೊ ಟೆಕ್ನಾಲಜಿ ಎನ್ನುವ ಕೋರ್ಸ್ ಅತಿ ಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಫಾರ್ಮಸಿ, ಔಷಧ ಕ್ಷೇತ್ರದಲ್ಲಿ ಸಂಶೋಧನೆ, ನರ್ಸಿಂಗ್, ಹೋಟೆಲ್ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಮತ್ತು ಉತ್ತಮ ಗಳಿಕೆಗೆ ದಾರಿಗಳಿವೆ. ಎಲ್ಲರೂ ಡಾಕ್ಟರ್ ಮತ್ತು ಎಂಜಿನಿಯರ್ಗಳಾಗುವ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ. ಭವಿಷ್ಯದ ಚಿಂತನೆಗಳಿಗೆ ಆಯಾ ಕ್ಷೇತ್ರಗಳಲ್ಲಿರುವವರು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೇವಲ ಬಿಎ, ಬಿಎಸ್ಸಿಯಿಂದ ಜೀವನ ಸಾಧ್ಯವಿಲ್ಲ. ಉತ್ತಮ ಜೀವನಕ್ಕಾಗಿ ಕೌಶಲ ಮತ್ತು ಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಸರ್ಕಾರದ ಕೌಶಲ ತರಬೇತಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಚ್.ಎಸ್. ರಾಘವೇಂದ್ರ ತಿಳಿಸಿದರು.

ಮುಖ್ಯ ಶಿಕ್ಷಕಿ ಎ.ಉಮಾ, ಟಿ.ರೂಪಾ, ಮಹಾಂತೇಶ್, ಅಭಿಷೇಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-44-767901617

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.