ನಮ್ಮ ಮಗ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 85ರಷ್ಟು ಅಂಕ ಗಳಿಸಿದ್ದಾನೆ. ಅವನಿಗೆ ಓದಿ ಓದಿ ಸುಸ್ತಾಗಿದೆಯಂತೆ. ಮುಂದೆ ಒಂದು ವರ್ಷ ವಿರಾಮ ತೆಗೆದುಕೊಳ್ಳುತ್ತಾನಂತೆ ಅಥವಾ ಮುಂದೆ ಓದುವುದೇ ಇಲ್ಲವಂತೆ. ಈ ವರ್ಷವಿಡೀ ಅಲ್ಲಿಲ್ಲಿ ಸುತ್ತಾಡಿಕೊಂಡು ಇರುತ್ತಾನಂತೆ. ಮುಂದಿನ ವರ್ಷ ಯಾವುದಾದರೂ ವ್ಯಾಪಾರ ಮಾಡಲು ಸಹಾಯ ಮಾಡಬೇಕಂತೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅವನು ಇಷ್ಟೊಂದು ಬೇಜವಾಬ್ದಾರಿಯಿಂದ ಇರಬಹುದೇ? ಅವನನ್ನು ಹೇಗೆ ಸರಿದಾರಿಗೆ ತರುವುದು?

ನೇತ್ರಾ ಅರವಿಂದ ಜಾಧವ್, ಹಳಿಯಾಳ

ನಿಮ್ಮ ಮಗ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 85ರಷ್ಟು ಅಂಕ ಪಡೆದಿರುವುದು ದೊಡ್ಡ ಸಾಧನೆ. ಆದರೆ ಈಗ ಅವನು ‘ಓದಿ ಸುಸ್ತಾಗಿದೆ’ ಎಂದು ಹೇಳುವುದು, ತಕ್ಷಣ ಮುಂದಿನ ದಾರಿಯ ಬಗ್ಗೆ ಗೊಂದಲದಲ್ಲಿರುವುದು– ಇವು ಇಂದಿನ ಅನೇಕ ಹದಿಹರೆಯದವರಲ್ಲಿ ಕಾಣುವ ಸಾಮಾನ್ಯ ಮನಃಸ್ಥಿತಿ. ಇದನ್ನು ಸ್ವಲ್ಪ ಆಳವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.

ಮುಂದೆ ಯಾವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕು, ತಾನು ಮುಂದೇನಾಗಬೇಕು ಎನ್ನುವ ಬಗ್ಗೆ ಅವನಲ್ಲಿ ಗೊಂದಲವಿರಬಹುದು. ಅದಕ್ಕೆಲ್ಲ ಒಂದಿಷ್ಟು ಸ್ಪಷ್ಟತೆ ಸಿಗುವತನಕ ತನ್ನ ಪಾಡಿಗೆ ತಾನಿದ್ದುಬಿಡೋಣ ಎಂದು ಅನ್ನಿಸಿರಬಹುದು. ಇದು ತಪ್ಪು ಎಂದು ನಾವು ನಿರ್ಧರಿಸಬೇಕಾಗಿಲ್ಲ. ಆದರೆ, ಇಂದಿನ ಸೋಷಿಯಲ್ ಮೀಡಿಯಾಗಳಿಂದ ಸಿಗುವ ಮಾಹಿತಿಗಳಿಂದ ಆತ ನಕಾರಾತ್ಮಕ ದಾರಿಯಲ್ಲಿ ಹೋಗುತ್ತಿದ್ದಾನೆಯೇ ಎನ್ನುವುದನ್ನು ಗಮನಿಸಬೇಕು. ಅದಕ್ಕಾಗಿ ಅವನ ಗೆಳೆಯರ ಸಹಾಯ ಪಡೆದುಕೊಳ್ಳಬೇಕು.

ವರ್ಷವಿಡೀ ಅವನು ಮಾಡುವ ಕಾರ್ಯಚಟುವಟಿಕೆಗಳು ಬಹಳ ಮುಖ್ಯವಾಗುತ್ತವೆ. ನಿರಂತರತೆ ತಪ್ಪಿದಾಗ, ಅವನಿಗೆ ಓದುವುದರಲ್ಲಿ ಆಸಕ್ತಿ ಕಡಿಮೆಯಾಗಬಹುದು. ‘ಕೆಲಸದ ಬದಲಾವಣೆಯೇ ವಿಶ್ರಾಂತಿ’ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ವಿದ್ಯಾರ್ಥಿಜೀವನದಲ್ಲಿ ಕಷ್ಟಪಟ್ಟರೆ ಮುಂದಿನ ಬದುಕನ್ನು ನಿರಾತಂಕವಾಗಿ ಕಳೆಯಬಹುದು ಎನ್ನುವುದನ್ನು ಅವನಿಗೆ ಅರ್ಥ ಮಾಡಿಸಬೇಕು.

ಮಗನ ಸ್ನೇಹಿತರಲ್ಲಿ ಯಾರಾದರೂ ನಪಾಸಾ ಗಿರಬಹುದು. ಅವರನ್ನು ಬಿಟ್ಟು ಮುಂದಿನ ಕಲಿಕೆಗೆ ಹೋಗಲು ಇವನಿಗೆ ಮನಸ್ಸಾಗದೇ ಇರಬಹುದು ಅಥವಾ ಆ ಸ್ನೇಹಿತ(ತೆ)ರಿಂದ ಇವನಿಗೆ ಮೋಸವಾಗಿರಬಹುದು. ಇವನ್ನೆಲ್ಲ ಪತ್ತೆ ಮಾಡಿ, ಅವನ ದಿನಚರಿಯಲ್ಲಾದ ವ್ಯತ್ಯಾಸವನ್ನು ಗಮನಿಸಬೇಕು. ಪಿಯುಸಿಯನ್ನು ಚೆನ್ನಾಗಿಯೇ ಓದಿದ ಅವನಿಗೆ ವಿರಾಮ ಬೇಕಾಗಿದ್ದರೆ, ಆರೆಂಟು ತಿಂಗಳಲ್ಲಿ ಕಲಿತು ಮುಗಿಸುವ ಯಾವುದಾದರೂ ಕೋರ್ಸ್ ಕಲಿಯಲು ಒತ್ತಾಯ ಮಾಡಿ. ಸಂಗೀತ, ವಾದ್ಯ, ಚಿತ್ರಕಲೆ ಇತ್ಯಾದಿಯಾದರೂ ಆಗಬಹುದು. ಅವನು ಮುಂದೆ ಮಾಡಬೇಕೆಂದುಕೊಂಡಿರುವ ಬಿಸಿನೆಸ್ ಮಾಡುತ್ತಿರುವವರ ಹತ್ತಿರ ಕೆಲಸಕ್ಕೆ ಸೇರಿಸಿ. ಇಷ್ಟಕ್ಕೆಲ್ಲಾ ಅವನ ಇಷ್ಟದ ಶಿಕ್ಷಕರ ಸಹಾಯವನ್ನು ಪಡೆದುಕೊಂಡು, ಅವನಿಗೆ ಸರಿಯಾದ ದಾರಿಯಲ್ಲಿ ಮುಂದುವರಿಯುವಂತೆ ಪ್ರೇರೇಪಿಸಿ.

ಅಷ್ಟಕ್ಕೂ ಇವು ನಿಮ್ಮಿಂದ ಸಾಧ್ಯವಾಗದಿದ್ದರೆ ಅವನಿಗೆ ಕೆರಿಯರ್ ಕೌನ್ಸೆಲಿಂಗ್ ಮಾಡಿಸಿ. ಅವರ ಮಾರ್ಗದರ್ಶನದಿಂದ ಅವನಿಗೆ ಅನುಕೂಲ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.