ಆಳಂದ: ‘ವಿದ್ಯಾರ್ಥಿಗಳ ಪ್ರತಿ ಯಶಸ್ಸಿನ ಹಿಂದೆ ಹೆತ್ತವರ ಶ್ರಮವೂ ಅಡಗಿದೆ. ಕುಟುಂಬ ಮತ್ತು ಸಮಾಜದ ಋಣವನ್ನು ತೀರಿಸುವಷ್ಟು ಬೆಳೆದರೆ ಮಾತ್ರ ಜೀವನದಲ್ಲಿ ನೆಮ್ಮದಿ ಸಂತಸ ಕಾಣಲು ಸಾಧ್ಯ’ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಚಾರ್ಯ ಮಹಾದೇವ ನೀಳಕಂಟೆ ಹೇಳಿದರು.

ಮಂಗಳವಾರ ಮಾದನ ಹಿಪ್ಪರಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಈ ವರ್ಷದ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ 17 ವಿದ್ಯಾರ್ಥಿನಿಯರಿಗೆ ಮತ್ತು ಅವರ ಪಾಲಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ಉಪನ್ಯಾಸಕ ಲಿಂಗನಬಸವ ಪಾಟೀಲ ಮಾತನಾಡಿ, ‘ನಗರ ಪ್ರದೇಶಗಳ ಕಾಲೇಜು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕೊಟ್ಟರೆ ಮಕ್ಕಳು ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗುತ್ತಾರೆ ಎಂಬ ಮನೋಭಾವ ಇದೆ. ಆದರೆ ನಿಜವಾದ ಶಿಕ್ಷಣ ಸಂಸ್ಕಾರ ನಾಗರೀಕತೆ ಇರುವುದು ನಮ್ಮ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಮಾತ್ರ. ನಗರಗಳ ಶಿಕ್ಷಣ ಎಂಬುದು ಕೇವಲ ಅಂಕಗಳಿಗೆ ಸೀಮಿತವಾಗಿದೆ. ನಿಜವಾದ ಶಿಕ್ಷಣ ಭೋಧಕರ ಮತ್ತು ವಿದ್ಯಾರ್ಥಿಗಳ ನಡುವಿನ ಉತ್ತಮ ಬಾಂಧವ್ಯದಲ್ಲಿದೆ’ ಎಂದರು.

ಉಪನ್ಯಾಸಕ ಪರಮೇಶ್ವರ ತಳಕೇರಿ, ಸುರೇಖಾ ಪಾಟೀಲ, ರಮೇಶ ಕುಲಕರ್ಣಿ, ಮಲ್ಲಿನಾಥ ನಿಂಬರಗಿ, ಕೃಷ್ಟಾ ಹಿರಾಸಿಂಗ, ಇದ್ದರು. ಎಸ್ಡಿ ಎಮ್ಸಿ ಅಧ್ಯಕ್ಷ ಮಹಿಬೂಬ್ ಫಣಿಬಂದ್ ,ಬಸವರಾಜ ಸಾಖರೆ, ಬಸವರಾಜ ಕಲ್ದೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-31-1287962234

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.