ಅಳವಂಡಿ: ಬಡತನದಲ್ಲೂ ಕಠಿಣ ಪರಿಶ್ರಮ, ಶ್ರದ್ಧೆ, ನಿರಂತರ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದಿಂದ ಗ್ರಾಮೀಣ ಪ್ರತಿಭೆ ಸಂಗೀತಾ ಸುಣಗಾರ ಅವರು, ಉತ್ತಮ ಸಾಧನೆ ಮಾಡಿದ್ದಾರೆ.

ಅಳವಂಡಿಯ ಸಿದ್ದೇಶ್ವರ ಸಂಯುಕ್ತ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಂಗೀತಾ ಸುಣಗಾರ ಅವರು ಕಲಾ ವಿಭಾಗದಲ್ಲಿ ಶೇ 96 ರಷ್ಟು ಫಲಿತಾಂಶ ಪಿಯುಸಿ ಕಲಾವಿಭಾಗದಲ್ಲಿ ಶೇ 96 ಫಲಿತಾಂಶ ದಾಖಲಿಸಿದ್ದಾರೆ. ಈ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಸಮಾಜ ಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರ ವಿಷಯದಲ್ಲಿ ತಲಾ 100 ಅಂಕ ಹಾಗೂ ಕನ್ನಡ ಹಾಗೂ ರಾಜ್ಯ ಶಾಸ್ತ್ರ ವಿಷಯದಲ್ಲಿ ತಲಾ 99 ಅಂಕಗಳಿಸಿದ್ದಾರೆ.

ಅಳವಂಡಿಯ ಗ್ರಾಮದ ಹನುಮಂತಪ್ಪ ಸುಣಗಾರ ಹಾಗೂ ಶಾರದಾ ಸುಣಗಾರ ದಂಪತಿಗೆ ನಾಲ್ವರು ಮಕ್ಕಳು. ಅದರಲ್ಲಿ ಸಂಗೀತಾ 3ನೇಯವರು. ಇದೇ ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದರು.

ಸಂಗೀತಾ ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ತಾಯಿ ಹಾಗೂ ಹಿರಿಯ ಸಹೋದರಿ ಖಾನಾವಳಿ ನಡೆಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಖಾನಾವಳಿಯ ಮೂಲಕ ಬಂದ ಆದಾಯದಲ್ಲಿ ತಂದೆಗೆ ಚಿಕಿತ್ಸೆ ಹಾಗೂ ಮೂವರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

ಸಂಗೀತಾ ಕೂಡ ನಿತ್ಯ ಕಾಲೇಜಿನಿಂದ ಬಂದ ಬಳಿಕ ಖಾನಾವಳಿ ಕೆಲಸಗಳಲ್ಲಿ ತಾಯಿ ಹಾಗೂ ಸಹೋದರಿಗೆ ನೆರವಾಗುತ್ತಿದ್ದರು. ಉಳಿದ ಸಮಯದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂಬ ಗುರಿಯೊಂದಿಗೆ ನಿತ್ಯ ನಿರಂತರವಾಗಿ ಅಭ್ಯಾಸದಲ್ಲಿ ತೊಡಗುತ್ತಿದ್ದರು. ‘ಕಾಲೇಜಿನಲ್ಲಿ ಅಂದು ಹೇಳಿದ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ. ಜತೆಗೆ ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ನನ್ನ ತಂದೆ-ತಾಯಿ, ಸಹೋದರ, ಸಹೋದರಿಯ ಪ್ರೋತ್ಸಾಹ, ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣವಾಗಿದೆ. ಪರಿಸ್ಥಿತಿ ಏನೇ ಇರಲಿ, ಓದುವ ಹಂಬಲವಿತ್ತು. ತಂದೆ-ತಾಯಿ ಪಡುವ ಕಷ್ಟ ನಮ್ಮಿಂದ ದೂರವಾಗಬೇಕು. ಹೀಗಾಗಿ ಮುಂದೆ ಉತ್ತಮ ಶಿಕ್ಷಣ ಪಡೆದು ಐಎಎಸ್, ಕೆಎಎಸ್ ಆಗುವ ಗುರಿಯಿದೆ’ ಎಂಬ ಸಂಗೀತಾ ಸುಣಗಾರ ‘ಪ್ರಜಾವಾಣಿ’ ಯೊಂದಿಗೆ ಮಾಹಿತಿ ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-2116712062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.