ಔರಾದ್: ತಾಲ್ಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ವೈಷ್ಣವಿ ಸಿದ್ದಪ್ಪ ಸಿದ್ದೆಸೂರೆ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಜೋಜನಾ ಗ್ರಾಮದ ವೈಷ್ಣವಿ ಕನ್ನಡ 99, ಹಿಂದಿ 98, ಇತಿಹಾಸ 98, ಅರ್ಥಶಾಸ್ತ್ರ 99, ವ್ಯವಹಾರ ಅಧ್ಯಯನ 97, ಲೆಕ್ಕಶಾಸ್ತ್ರ 97 ಸೇರಿ ಒಟ್ಟು 588 ಅಂಕಗಳೊಂದಿಗೆ ಶೇ98 ಫಲಿತಾಂಶ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ತಿಳಿಸಿದ್ದಾರೆ.

ವೈಷ್ಣವಿ ಅವರ ತಂದೆ ಸಿದ್ದಪ್ಪ ಹೋಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಮನೆ ಕೆಲಸ ನೋಡಿಕೊಳ್ಳುತ್ತಾರೆ. ಬಡ ಕುಟುಂಬದ ಇವರು ಮುಂದೆ ಹೆಚ್ಚು ಓದಿ ಸಿಎ ಆಗುವ ಕನಸು ಹೊಂದಿದ್ದಾರೆ.

ವಿದ್ಯಾರ್ಥಿನಿ ಸಾಧನೆಗೆ ಜೋಜನಾ ಗ್ರಾಮಸ್ಥರು ಹಾಗೂ ಉಪನ್ಯಾಸಕ ದತ್ತಾತ್ರಿ ಮಡಿವಾಳ, ಮಹಾಂತೇಶ್ ಪಾಂಚಾಳ, ಸುಧೀರ್ ಅಲೂರೆ, ಭಾನು ಪ್ರಕಾಶ, ರಾಜಕುಮಾರ ಹಳ್ಳಿಕರ್, ಸಂತೋಷ್ ಧೂಳ್ಗೆಂಡೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಪ್ರಿಯಾಂಕಾ ಗೊನ್ನಳ್ಳಿಕರ, ಅಶ್ವಿನಿ ಹಿಂದೊಡ್ಡಿ, ಮೀರಾತಾಯಿ ಕಾಂಬಳೆ, ವನದೇವಿ ಸನ್ಮಾನಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-33-1256770493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.