ಬೆಳಗಾವಿ: ‘ಇಲ್ಲಿನ ಕೆಎಲ್ಇ ಸಂಸ್ಥೆಯ ಪದವಿಪೂರ್ವ ಕಾಲೇಜುಗಳು 2025–26ನೇ ಸಾಲಿನ ಪಿಯು ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 27 ರ್ಯಾಂಕುಗಳನ್ನು ಪಡೆದಿವೆ. ಒಟ್ಟು 11,516 ವಿದ್ಯಾರ್ಥಿಗಳಲ್ಲಿ 11,047 ಮಂದಿ ಉತ್ತೀರ್ಣರಾಗಿದ್ದು, ಶೇ 95.93 ಫಲಿತಾಂಶ ದಾಖಲಿಸಿದ್ದಾರೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಕೋರೆ ಹೇಳಿದರು.

ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯ 37 ಪಿಯು ಕಾಲೇಜುಗಳ ಪೈಕಿ ಕಲಾ ವಿಭಾಗದಲ್ಲಿ ಐವರು (3ನೇ, 7ನೇ, 10ನೇ ರ್ಯಾಂಕ್), ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು (4ನೇ, 5ನೇ, 6ನೇ, 7ನೇ, 8ನೇ, 9ನೇ ಹಾಗೂ 10ನೇ ರ್ಯಾಂಕ್) ಹಾಗೂ ವಿಜ್ಞಾನ ವಿಭಾಗದಲ್ಲಿ 9 ವಿದ್ಯಾರ್ಥಿಗಳು (4ನೇ, 7ನೇ, 8ನೇ, 9ನೇ ಹಾಗೂ 10ನೇ) ರ್ಯಾಂಕ್ ಗಳಿಸಿದ್ದಾರೆ’ ಎಂದರು.

‘ವ್ಯವಹಾರ ಅಧ್ಯಯನದಲ್ಲಿ 172, ಗಣಿತದಲ್ಲಿ 138, ಅರ್ಥಶಾಸ್ತ್ರದಲ್ಲಿ 119, ಕಂಪ್ಯೂಟರ್ ವಿಜ್ಞಾನದಲ್ಲಿ 102 ಸೇರಿ ಒಟ್ಟಾರೆಯಾಗಿ ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿಗಳು 1007 ಸೆಂಟಮ್ಸ್ (100ಕ್ಕೆ 100) ಅಂಕಗಳನ್ನು ಪಡೆದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಕಲಾ ವಿಭಾಗದಲ್ಲಿ ಶೇ 91.29, ವಾಣಿಜ್ಯದಲ್ಲಿ ಶೇ 96.62 ಹಾಗೂ ವಿಜ್ಞಾನದಲ್ಲಿ ಶೇ 96.83 ಫಲಿತಾಂಶ ಬಂದಿದೆ’ ಎಂದರು.

‘ಗ್ರಾಮೀಣ ಹಾಗೂ ಗಡಿಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ಕೆಎಲ್ಇ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಪಿಯು ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಈ ಸಮಗ್ರ ಶೈಕ್ಷಣಿಕ ವ್ಯವಸ್ಥೆಯೇ ಉತ್ತಮ ಫಲಿತಾಂಶಗಳಿಗೆ ಕಾರಣವಾಗಿದೆ. ಡಿಸ್ಟಿಂಕ್ಷನ್ನಲ್ಲಿ ಕಲಾ ವಿಭಾಗದ 410, ವಾಣಿಜ್ಯದ 1,251 ಹಾಗೂ ವಿಜ್ಞಾನ ವಿಭಾಗದ 2,270 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 6,163 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಅಮಿತ್ ಕೋರೆ ಮಾಹಿತಿ ನೀಡಿದರು.

1.48 ಲಕ್ಷ ವಿದ್ಯಾರ್ಥಿಗಳು: ‘ಸಪ್ತರ್ಷಿಗಳ ನಿಸ್ವಾರ್ಥತ್ಯಾಗದಿಂದ ಸ್ಥಾಪನೆಯಾಗಿರುವ ಕೆಎಲ್ಇ ಸಂಸ್ಥೆ ಇಂದು 318 ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದೆ. 1.48 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದು, ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದ ವರೆಗೆ ಹಾಗೂ ಸಮುದಾಯ ಆರೋಗ್ಯ ಸೇವೆಯ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಎಲ್ಇ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ’ ಎಂದು ಅಮಿತ್ ಕೋರೆ ತಿಳಿಸಿದರು.

‘ಮುಂದಿನ ವರ್ಷದಿಂದ ವಿಶೇಷ ತರಬೇತಿಯನ್ನು 8ನೇ ತರಗತಿಯಿಂದಲೇ ನೀಡಲಾಗುವುದು. ಒಲಿಂಪಿಕ್ಗೆ ಅರ್ಹತೆ ಪಡೆಯುವ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗುವುದು’ ಎಂದರು.

ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ, ಆಜೀವ ಸದಸ್ಯರಾದ ಡಾ.ಎಂ.ಪಿ.ಸತೀಶ, ಎಸ್.ಜಿ. ನಂಜಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-967801940

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.