ಬೀದರ್: ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖ್ಖೆಳ್ಳಿ ಮತ್ತು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ)ನಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿಸಿದೆ ಎಂದು ಬೀದರ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪದವಿ ಪೂರ್ವ) ಚಂದ್ರಕಾಂತ ಶಹಾಬಾದಕರ್ ತಿಳಿಸಿದ್ದಾರೆ.

ಮನ್ನಾಏಖ್ಖೆಳ್ಳಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಉನ್ನತೀಕರಿಸಿ ಪದವಿ ಪೂರ್ವ ಕಾಲೇಜು ಮಾಡಲಾಗಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ ಭಾಷಾ ವಿಷಯ ಕನ್ನಡ (01),ಇಂಗ್ಲಿಷ್ (02) ಮತ್ತು ವಾಣಿಜ್ಯ ವಿಭಾಗ ಸಂಯೋಜನೆ ಅರ್ಥಶಾಸ್ತ್ರ (22), ವ್ಯವಹಾರ ಅಧ್ಯಯನ (27), ಲೆಕ್ಕಶಾಸ್ತ್ರ (30), ಗಣಕವಿಜ್ಞಾನ (41)(ಇ.ಬಿ.ಎ.ಸಿಎಸ್.) ಮತ್ತು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ನಲ್ಲಿರುವ (ಬಿ) ಸರ್ಕಾರಿ ಪ್ರೌಢ ಶಾಲೆ ಉನ್ನತೀಕರಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಡಲಾಗಿದೆ. ಭಾಷಾ ವಿಷಯ ಕನ್ನಡ (01),ಇಂಗ್ಲಿಷ್ (02) ಮತ್ತು ವಾಣಿಜ್ಯ ವಿಭಾಗ ಸಂಯೋಜನೆ ಅರ್ಥಶಾಸ್ತ್ರ (22), ವ್ಯವಹಾರ ಅಧ್ಯಯನ (27), ಲೆಕ್ಕಶಾಸ್ತ್ರ (30), ಗಣಕವಿಜ್ಞಾನ (41) (ಇ.ಬಿ.ಎ.ಸಿಎಸ್.) ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ.

ಪಾಲಕರು, ವಿದ್ಯಾರ್ಥಿಗಳು 2026-27 ನೇ ಸಾಲಿನಿಂದ ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯಬೇಕು ಎಂದು ಡಿಡಿಪಿಯು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-33-1621547860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.