ಚಾಮರಾಜನಗರ: ಪಿಯುಸಿ ಪರೀಕ್ಷೆಯಲ್ಲಿ ಚಾಮರಾಜನಗರದ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಾಲೇಜಿಗೆ ಶೇ 90.49ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾಗಿದ್ದ 463 ವಿದ್ಯಾರ್ಥಿಗಳ ಪೈಕಿ 419 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂ.ಸೌಮ್ಯಾ 580 (ಶೇ 96.67), ವಿಜ್ಞಾನ ವಿಭಾಗದಲ್ಲಿ ಕೆ.ಅನು 575 (ಶೇ 95.83), ಕಲಾ ವಿಭಾಗದಲ್ಲಿ ಸುಪ್ರಿತಾ 571 (ಶೇ 95.17) ಪಡೆದಿದ್ದಾರೆ.

90 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 248 ವಿದ್ಯಾರ್ಥಿಗಳು ಪ್ರಥಮ, 66 ದ್ವಿತೀಯ 11 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಜೆಎಸ್ಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ ತಿಳಿಸಿದ್ದಾರೆ.

ಸೇವಾಭಾರತಿ ಸಾಧನೆ:ಚಾಮರಾಜನಗರದ ಸೇವಾ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ 133 ವಿದ್ಯಾರ್ಥಿಗಳಲ್ಲಿ 122 ಮಂದಿ ಉತ್ತೀರ್ಣರಾಗಿದ್ದು ಶೇ 91.72 ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 56 ವಿದ್ಯಾರ್ಥಿಗಳ ಪೈಕಿ 51 ಮಂದಿ ಉತ್ತೀರ್ಣರಾಗಿದ್ದು ಶೇ 91 ಫಲಿತಾಂಶ ಸಿಕ್ಕಿದೆ. 9 ಅತ್ಯುನ್ನತ ಶ್ರೇಣಿ, 38 ಪ್ರಥಮ ದರ್ಜೆ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ತೇಜಸ್ 565 (ಶೇ 94.1), ಚಂದನಾ ಕೆ.ಎಂ 557 (ಶೇ 92.8) ಎನ್.ಮಹಾಲಕ್ಷ್ಮೀ 547 (ಶೇ 91.1).

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 77 ವಿದ್ಯಾರ್ಥಿಗಳ ಪೈಕಿ 71 ಮಂದಿ ಪಾಸಾಗಿದ್ದು ಶೇ 92.20 ಫಲಿತಾಂಶ ಬಂದಿದ್ದು, 16 ಅತ್ಯುನ್ನತ ಶ್ರೇಣಿ, 48 ಪ್ರಥಮ ದರ್ಜೆ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಜ್ವಲ್ 569 (ಶೇ 94.8), ಮೋಹನ್ ರಾವ್ ಎಂ. 567 (ಶೇ 94.5), ಎಸ್.ಪ್ರಜ್ವಲ್ 563 (ಶೇ 93.8) ಅಂಕ ಪಡೆದಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ:ಸಾಲೂರು ಬೃಹನ್ಮಠದ ಮಹದೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ 83 ಫಲಿತಾಂಶ, ಕಲಾ ವಿಭಾಗದಲ್ಲಿ ಶೇ 53 ಫಲಿತಾಂಶ ಬಂದಿದೆ. ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ 100 ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗ ದಲ್ಲಿ ಭೂಮಿಕಾ 503, ಕಲಾ ವಿಭಾಗದಲ್ಲಿ ಗೀತಾ ಜಿ, 507 ಅಂಕ ಪಡೆದಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪಿಯು ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ 95 ಫಲಿತಾಂಶ ಸಿಕ್ಕಿದೆ. 6 ಅತ್ಯುನ್ನತ ಶ್ರೇಣಿ, 14 ಪ್ರಥಮ ಶ್ರೇಣಿ ಬಂದಿದೆ. ವೀರಭದ್ರಪ್ಪ 559, ಅಂಜಲಿ ಜಿ 549, ಲೊಕೇಶ್ 521 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಶೇ 86 ಫಲಿತಾಂಶ ದೊರೆತಿದ್ದು ಮೂವರು ಅತ್ಯುನ್ನತ ಶ್ರೇಣಿ, 10 ಮಂದಿ ಪ್ರಥಮ ಶ್ರೇಣಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಲೊಕೇಶ್ ಜೆ, 542, ಪ್ರಜ್ವಲ್ 532, ದಿಗಂತ್ 527 ಅಂಕ ಪಡೆದಿದ್ದಾರೆ.

ಉತ್ತಮ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-37-46335583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.