ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. 595 (ಶೇ 99.16) ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5ನೇ ಸ್ಥಾನಕ್ಕೆ ಜಿಗಿದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾನೆ.

ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ 593 (ಶೇ 98.83) ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಪಡೆದಿದ್ದಳು. ಚಿನ್ಮಯ್ ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್ 29ರಂದು ಹೊರಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ 595 (ಶೇ 99. 16) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ್ಯಾಂಕ್ (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದಿದ್ದಾನೆ.

ತನುಶ್ರೀ 593 (ಶೇ 98.83) (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ.

ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ 590 ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆದಿದ್ದು ಮರು ಮೌಲ್ಯಮಾಪನ ನಡೆಸಿದಾಗ ಭಾಷಾ ವಿಷಯದಲ್ಲಿ ಹೆಚ್ಚುವರಿ 1 ಅಂಕ ಪಡೆದು (591) ಶೇ 98.50 ಅಂಕ ಪಡೆದು ರಾಜ್ಯಕ್ಕೆ 9ನೇ ರ್ಯಾಂಕ್, ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾನೆ.

ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಜಿ.ಎಸ್.ರಾಹುಲ್ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಪಡೆದು 588, ಆಶ್ಲೇಷ್ ಜೆ.ಎಸ್. ಹೆಚ್ಚುವರಿ 6 ಅಂಕ ಪಡೆದು 573, ಸಮ್ಯಕ್ ತೇಜಸ್ವಿ ಹೆಚ್ಚುವರಿ 4 (576) ಅಂಕ ಪದಿದ್ದಾರೆ. ಮೈಥಿಲಿ ಗೋರೆ, ಮೋಕ್ಷಾ, ನಿನಾದ ಎಸ್.ಎ., ಪ್ರಣವ್ ದೇವ್, ವೆನಿಕಾ ಬಿ.ವೈ., ವಿಕಾಸ್ ಜಿ.ಎನ್., ಯಶಸ್ವಿ ಆರ್.ಸಾಲ್ಯಾನ್, ಯಶಸ್ವಿನಿ ಜಯೇಂದ್ರ ಬಂಗೇರ ಹೆಚ್ಚುವರಿ ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಹೆಚ್ಚುವರಿ 11 ಅಂಕ ಪಡೆದು 584 (ಶೇ 97.33) ಸಾಧನೆ ಮಾಡಿದ್ದಾರೆ. ಒಟ್ಟು 17 ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಪ್ರಯತ್ನಿಸಿದ್ದು ಈ ಪೈಕಿ ಬಹುತೇಕ ಮಂದಿ ಹೆಚ್ಚುವರಿ ಅಂಕ ಪಡೆದಿದ್ದಾರೆ ಎಂದು ಶೈಕ್ಷಣಿಕ ಮಂಡಳಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ. ಕಾಶಿನಾಥ್., ನಿರ್ದೇಶಕ ಗಂಗಾಧರ್ ಇ. ಮಂಡಳಲೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-1676567889

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.