ದಾವಣಗೆರೆ: ನಗರದ ಜಿ.ಎಂ. ಸಮೂಹ ಸಂಸ್ಥೆಗಳ ಅಂಗಸಂಸ್ಥೆಯಾದ ಜಿ.ಎಂ. ಹಾಲಮ್ಮ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಪಡೆದಿದೆ.

ಕಾಲೇಜಿನ ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ಸಂಸ್ಥೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ವಿಜ್ಞಾನ ವಿಭಾಗವು ಶೇ 100ರಷ್ಟು, ವಾಣಿಜ್ಯ ವಿಭಾಗವು ಶೇ 100ರಷ್ಟು ಅಮೋಘ ಫಲಿತಾಂಶ ದಾಖಲಿಸಿವೆ.

ವಿಜ್ಞಾನ ವಿಭಾಗದಲ್ಲಿ ತನ್ಮಯ್ ಎಸ್.ಕೆ. ಶೇ 96.83, ಮಹೇಶ್ ಎಸ್. ಶೇ 96.50 ಹಾಗೂ ಶ್ರದ್ಧಾ ಶೇ ಎಂ. 96.17 ಹಾಗೂ ವಾಣಿಜ್ಯ ವಿಭಾಗದಲ್ಲಿ ಹರಿಣಿ ಬಿ.ಎ. ಶೇ 98.33, ಗಣೇಶ್ ಡಿ.ಆರ್. ಶೇ 97.83, ನಿಸರ್ಗ ಪಿ. ಆನಂದಿ ಶೇ 97.55 ಅಮೋಘ ಸಾಧನೆ ತೋರಿದ್ದಾರೆ.

ವ್ಯವಹಾರ ಅಧ್ಯಯನದಲ್ಲಿ 16 ವಿದ್ಯಾರ್ಥಿಗಳು, ಸಂಖ್ಯಾಶಾಸ್ತ್ರದಲ್ಲಿ 10, ಗಣಿತದಲ್ಲಿ 3, ಕನ್ನಡ, ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ, ಗಣಕಯಂತ್ರ ವಿಷಯದಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 39 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 46 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 44 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳ ನಿರಂತರ ಶ್ರಮ, ಪೋಷಕರ ಸಹಕಾರ ಹಾಗೂ ಬೋಧಕ ವರ್ಗದ ಶಿಸ್ತುಬದ್ಧ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಓಂಕಾರಪ್ಪ ಎಚ್.ಎಸ್. ತಿಳಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳನ್ನು ಜಿ.ಎಂ. ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಷ್, ಪ್ರಾಚಾರ್ಯ ಓಂಕಾರಪ್ಪ ಎಚ್.ಎಸ್., ಕಾಲೇಜಿನ ಎಎಒ ಶಿವಕುಮಾರ್ ಜಿ.ಜೆ., ಜಿ.ಎಂ. ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-43-359164460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.