ನವದೆಹಲಿ (ಪಿಟಿಐ): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಅಪ್ಲೋಡ್ ಮಾಡಿರುವ ಸ್ಕ್ಯಾನ್ ಮಾಡಿರುವ ಉತ್ತರ ಪತ್ರಿಕೆಗಳು ತಮ್ಮ ಹಸ್ತಾಕ್ಷರದೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು 12ನೇ ತರಗತಿಯ ಹಲವು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಸಿಬಿಎಸ್ಇ ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದಿರುವ ಮಧ್ಯೆಯೇ ಮತ್ತೊಂದು ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೆಹಲಿಯ ವಿದ್ಯಾರ್ಥಿ ವೇದಾಂತ್ ಎಂಬುವವರು, ‘ಮರು ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿ ಅಪ್ಲೋಡ್ ಮಾಡಲಾಗಿರುವ ಉತ್ತರ ಪತ್ರಿಕೆಯು ನನ್ನದಲ್ಲ. ಅದರಲ್ಲಿನ ಹಸ್ತಾಕ್ಷರಕ್ಕೂ ನನ್ನ ಹಸ್ತಾಕ್ಷರಕ್ಕೂ ಹೊಂದಿಕೆಯಾಗುತ್ತಿಲ್ಲ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

‘ಅನಿರೀಕ್ಷಿತವಾಗಿ ಕಡಿಮೆ ಅಂಕ ಬಂದಿದ್ದ ಕಾರಣ ಉತ್ತರ ಪತ್ರಿಕೆಯ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದೆವು. ಸೋಮವಾರ ಉತ್ತರ ಪತ್ರಿಕೆಯ ಪ್ರತಿಯನ್ನು ಪ್ರಕಟಿಸಲಾಗಿದೆ’ ಎಂದು ವಿದ್ಯಾರ್ಥಿ ಬರೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ಸಂಜನಾ ಅವರೂ, ‘ರಸಾಯನ ವಿಜ್ಞಾನದ ಉತ್ತರ ಪತ್ರಿಕೆಯ ಪ್ರತಿಯಲ್ಲಿನ ಹಸ್ತಾಕ್ಷರವು ನನ್ನ ಹಸ್ತಾಕ್ಷರದೊಂದಿಗೆ ತಾಳೆಯಾಗುತ್ತಿಲ್ಲ. 70 ಅಂಕಗಳಿಗೆ 11 ಅಂಕ ಪಡೆದಿರುವುದನ್ನು ಕಂಡು ಆಘಾತಗೊಂಡೆ’ ಎಂದು ಹೇಳಿದ್ದಾರೆ. ‘ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ನನ್ನ ವೈಯಕ್ತಿಕ ಮಾಹಿತಿ ಇದೆ. ಆದರೆ ನಂತರ ಪುಟದಲ್ಲಿನ ಹಸ್ತಾಕ್ಷರ ಹೊಂದಿಕೆಯಾಗುತ್ತಿಲ್ಲ’ ಎಂದು ದೂರಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳು ಇಂಥದ್ದೇ ಆರೋಪ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-51-55443958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.