ಗದಗ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಪರೀಕ್ಷಾ ಮಂಡಳಿ ಎಡವಟ್ಟಿನಿಂದ ಗಜೇಂದ್ರಗಡ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಎರಡೆರಡು ಫಲಿತಾಂಶ ಪ್ರಕಟವಾಗಿದೆ. ಇದರಿಂದ ವಿದ್ಯಾರ್ಥಿನಿಯರು ಗೊಂದಲಕ್ಕೆ ಸಿಲುಕಿದ್ದಾರೆ.

ಪ್ರೇಮಾ ದೊಡ್ಡಪ್ಪ ಭೋಸಲೆ ಎನ್ನುವ ವಿದ್ಯಾರ್ಥಿನಿ ಆರಂಭದಲ್ಲಿ ಫಲಿತಾಂಶ ನೋಡಿದಾಗ ಕನ್ನಡ 100, ಇಂಗ್ಲಿಷ್ 93, ಭೌತಶಾಸ್ತ್ರ 89, ರಸಾಯನಶಾಸ್ತ್ರ 99, ಗಣಿತ 87, ಜೀವಶಾಸ್ತ್ರ 94 ಒಟ್ಟು 561 ಅಂಕಗಳೆಂದು ಪ್ರಕಟವಾಗಿದೆ. ಮರುದಿನ ಪರಿಶೀಲಿಸಿದಾಗ ಕನ್ನಡ 95, ಇಂಗ್ಲಿಷ್ 67, ಭೌತಶಾಸ್ತ್ರ 69, ರಸಾಯನಶಾಸ್ತ್ರ 51, ಗಣಿತ 62, ಜೀವಶಾಸ್ತ್ರ 71 ಒಟ್ಟು 415 ಅಂಕಗಳೆಂದು ಬದಲಾಗಿದೆ.

ಅದೇರೀತಿ, ಸಹನಾ ಹೂಗಾರ ಎನ್ನುವ ವಿದ್ಯಾರ್ಥಿನಿಯ ಆರಂಭದ ಫಲಿತಾಂಶದಲ್ಲಿ ಗಣಿತ ವಿಷಯಕ್ಕೆ 73 ಅಂಕಗಳನ್ನು ನೀಡಲಾಗಿದೆ. ನಂತರ ಪರಿಶೀಲಿಸಿದಾಗ ಅದೇ ವಿಷಯಕ್ಕೆ 61 ಅಂಕಗಳೆಂದು ಬದಲಾಗಿದೆ.

‘ನಾವು ಚೆನ್ನಾಗಿ ಪರೀಕ್ಷೆ ಬರೆದಿದ್ದೇವೆ. ಅದಕ್ಕೆ ತಕ್ಕಂತೆ ಪ್ರಕಟವಾದ ಫಲಿತಾಂಶ ನಂತರದಲ್ಲಿ ಬದಲಾವಣೆ ಆಗುತ್ತಿದೆ. ಈಗ ವೆಬ್ಸೈಟ್ಗೆ ಹೋಗಿ ನೋಡಿದರು ಸಹ ಕಡಿಮೆ ಅಂಕಗಳಿವೆ’ ಎಂದು ವಿದ್ಯಾರ್ಥನಿಯರು ಅಳಲು ತೋಡಿಕೊಂಡರು.

‘ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವಲ್ಲಿ ಇಲಾಖೆಯ ಬೇಜವ್ದಾರಿತನ ಹಾಗೂ ಎಡವಟ್ಟು ಮಕ್ಕಳನ್ನು ಖಿನ್ನತೆಗೆ ಒಳಪಡಿಸುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-844922196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.