ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಗ್ರಾಮದ ವಿದ್ಯಾನಿಕೇತನ ಖಾಸಗಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯು.ಶ್ರಾವಣಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 99.66ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾಳೆ.

ಕನ್ನಡದಲ್ಲಿ 99, ಸಂಸ್ಕೃತ 100, ಭೌತಶಾಸ್ತ್ರ 100, ರಾಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಇದೇ ಕಾಲೇಜಿನ ಅರ್ಜುನ ಗ್ವಾತಗಿ ಶೇ 99.50ರಷ್ಟು ಅಂಕಗಳು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದರೆ, ಇನ್ನೋರ್ವ ವಿದ್ಯಾರ್ಥಿನಿ ವೈಷ್ಣವಿ ಶೇ 99.16ರಷ್ಟು ಫಲಿತಾಂಶ ಗಳಿಸಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾಳೆ.

ಅರ್ಜುನ ಗೊತಗಿ ಕನ್ನಡದಲ್ಲಿ 100, ಇಂಗ್ಲಿಷ್ 99, ಭೌತಶಾಸ್ತ್ರ 99, ರಾಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100 ಅಂಕಗಳು ಪಡೆದಿದ್ದಾನೆ. ವೈಷ್ಣವಿ ಕನ್ನಡದಲ್ಲಿ 97, ಇಂಗ್ಲಿಷ್ 99, ಭೌತಶಾಸ್ತ್ರ 100, ರಾಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ ವಿಷಯದಲ್ಲಿ 100 ಅಂಕಗಳು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾನಿಕೇತನ ಪಿಯು ಕಾಲೇಜಿನ ಸಂಸ್ಥಾಪಕ ನೆಕ್ಕಂಟಿ ಸೂರಿಬಾಬು ಮತ್ತು ವಿದ್ಯಾ ರ್ಥಿಗಳು ಶ್ರೀರಾಮನಗರದ ವಿದ್ಯಾನಿಕೇತನ ಕಾಲೇಜಿನ ಬಳಿ ಪಟಾಕಿ ಸಿಡಿಸಿ ಬಣ್ಣ ಎರಚಿ ಕಿರುಚುತ್ತಾ ಸಂಭ್ರಮಿಸಿದರು. ಕೆಲ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.

ಬಾಲಕಿಯರ ಪದವಿ ಪೂರ್ವ ಕಾಲೇಜು: ಗಂಗಾವತಿ ನಗರ ದ ಎಂ.ಎನ್.ಎ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯು ಫಲಿತಾಂಶ ಶೇ 94.52ರಷ್ಟು ಬಂದಿದೆ. ಈ ಬಾರಿ ಒಟ್ಟು 365 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 345 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 44 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 217 ಫಸ್ಟ್ ಕ್ಲಾಸ್, 66 ಸೆಕಂಡ್ ಕ್ಲಾಸ್, 18 ವಿದ್ಯಾರ್ಥಿಗಳು ಪಾಸಿಂಗ್ ಕ್ಲಾಸಿನಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಫರ್ಹಾನ 554 ಅಂಕ, ವಾಣಿಜ್ಯ ವಿಭಾಗದಲ್ಲಿ ಶಾಹೀದ ಬೇಗಂ 562 ಅಂಕ, ಕಲಾ ವಿಭಾಗದಲ್ಲಿ ಲಕ್ಷ್ಮಿ 576 ಅಂಕಗಳಿಸಿ ಕಾಲೇಜಿಗೆ ಉತ್ತ ಮ ಫಲಿತಾಂಶ ಹೊರತಂದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಆಡಳಿತ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-378943103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.