ಗಂಗಾವತಿ: ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ವಿದ್ಯಾನಗರದ ವೈಜೆಆರ್ ಪಿಯು ಕಾಲೇಜು ಅತ್ಯುತ್ತಮ ಸಾಧನೆ ಮಾಡಿದೆ’ ಎಂದು ವೈಜೆಆರ್ ಪಿಯು ಕಾಲೇಜಿನ ಚೇರಮನ್ ಕಲ್ಯಾಣಂ ಜಾನಕಿರಾಮ ತಿಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 100, ವಿಜ್ಞಾನ ವಿಭಾಗದಲ್ಲಿ ಶೇ 95ರಷ್ಟು ಫಲಿತಾಂಶ ಪಡೆದಿದೆ.

ಒಟ್ಟು 363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 153 ಡಿಸ್ಟಿಂಕ್ಷನ್, 184 ಪ್ರಥಮ ದರ್ಜೆ, 11 ದ್ವೀತಿಯ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಜಿ.ಪ್ರಣವಿ 594 ಅಂಕದೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ಪಿ.ರೇವಂತಕುಮಾರ 591 ಅಂಕ ಗಳಿಸಿ ರಾಜ್ಯಕ್ಕೆ 9ನೇ ಸ್ಥಾನ ಹಾಗೂ ದೊಡ್ಡಬಸವ 589 ಅಂಕ ಗಳಿಸಿ, ಜಿಲ್ಲಾಮಟ್ಟಕ್ಕೆ ಸಾಧನೆಗೈದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ದಿವ್ಯಾ 594 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದರೆ, ಸೌಮ್ಯ ಭಂಡಾರಿ 592 ಅಂಕ ಗಳಿಸಿ, ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ದಿಯಾ ಪಿ. ಖಂಡೆಲ್ವಾಲ್ 591 ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಪಿ.ರೇವಂತಕುಮಾರ ಶೇ 98ರಷ್ಟು ಅಂಕ ಗಳಿಸಿ ಕೊಪ್ಪಳ, ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ದೊಡ್ಡಬಸವ ಶೇ 97, ನಿತೀಶ ಎಂ. ಶೇ 92ರಷ್ಟು ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ನಿರ್ದೇಶಕ ಕಲ್ಯಾಣಂ ಜಯದೀಪ್, ಕಲ್ಯಾಣಂ ವಂಶಿ ಸೇರಿದಂತೆ ಪ್ರಾಚಾರ್ಯರು, ಉಪನ್ಯಾಸಕರು ಸೇರಿ ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-501637890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.