ಹಾಸನ: ಎಸ್ಎಸ್ಎಲ್ಸಿ ಫಲಿತಾಂಶಕ್ಕಾಗಿ ಪ್ರಕಟವಾಗುತ್ತಿದ್ದಂತೆಯೇ ಇದೀಗ ವಿದ್ಯಾರ್ಥಿಗಳ ಪೋಷಕರು, ಪಿಯುಸಿ ಪ್ರವೇಶಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಮನೆಗೆ ಇದೀಗ ಖಾಸಗಿ ಪಿಯು ಕಾಲೇಜುಗಳಿಂದ ‘ದಾಖಲಾತಿ ಆಹ್ವಾನ’ದ ಕರೆಗಳು ಬರುತ್ತಿದ್ದು, ಇನ್ನೊಂದೆಡೆ ಸರ್ಕಾರಿ ಪದವಿಪೂರ್ವ ಕಾಲೇಜುಗಳೂ ಪೈಪೋಟಿ ನೀಡುತ್ತಿವೆ.

ಶೇ 75ರಿಂದ ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿರುವ ಖಾಸಗಿ ಕಾಲೇಜುಗಳು, ಪೋಷಕರ ಮೊಬೈಲ್ ಸಂಖ್ಯೆ ಸಂಗ್ರಹಿಸಿ ದಿನಕ್ಕೆ 3–4 ಬಾರಿ ಕರೆ ಮಾಡುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳಿಂದ ಪೋಷಕರ ಮೊಬೈಲ್ ಸಂಖ್ಯೆ ಪಡೆದು ನೇರವಾಗಿ ಕರೆ ಮಾಡುವುದು ಸಾಮಾನ್ಯವಾಗಿದೆ ಎಂದು ಪೋಷಕರು ದೂರಿದ್ದಾರೆ.

ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಖಾಸಗಿ ಪಿಯು ಕಾಲೇಜುಗಳಿದ್ದು, ಪ್ರತಿಯೊಂದು ಕಾಲೇಜು ತನ್ನ ಪ್ರತಿಷ್ಠೆ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸೆಳೆಯಲು ಪೈಪೋಟಿಗೆ ಇಳಿದಿವೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಓದಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಗ್ರಹಿಸಿ, ಅವರ ಪೋಷಕರಿಗೆ ಕರೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ.

ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಕರೆ ಮಾಡಿ, ತಮ್ಮ ಕಾಲೇಜಿನಲ್ಲಿರುವ ಆಕರ್ಷಕ ಸೌಲಭ್ಯ, ಹಾಸ್ಟೆಲ್, ಕೋಚಿಂಗ್, ಪ್ರಯೋಗಾಲಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ದಾಖಲಾತಿಗೆ ಆಹ್ವಾನಿಸುತ್ತಿದ್ದಾರೆ.

ವಿಜ್ಞಾನ, ವಾಣಿಜ್ಯಕ್ಕೆ ಭಾರಿ ಬೇಡಿಕೆ: ಆಯಾ ತಾಲ್ಲೂಕಿನ ಖಾಸಗಿ ಕಾಲೇಜು ಗಳು ತಮ್ಮ ವ್ಯಾಪ್ತಿಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಕ್ಕೆ ದಾಖಲಾತಿಗೆ ಆಹ್ವಾನ ನೀಡುತ್ತಿವೆ. ಆದರೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ವಾಣಿಜ್ಯ ವಿಭಾಗಕ್ಕೆ ₹15 ಸಾವಿರದಿಂದ ₹35 ಸಾವಿರ, ವಿಜ್ಞಾನ ವಿಭಾಗಕ್ಕೆ ₹35 ಸಾವಿರದಿಂದ ₹50 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಿವೆ. ಕೆಲ ಕಾಲೇಜುಗಳು ಶೇ 90ಕ್ಕಿಂತ ಹೆಚ್ಚು ಅಂಕ ಪಡೆದರೆ ಶುಲ್ಕ ರಿಯಾಯಿತಿ, ಉಚಿತ ಪುಸ್ತಕ, ಸಮವಸ್ತ್ರ ನೀಡುವುದಾಗಿ ಘೋಷಿಸಿವೆ.

‘ನನ್ನ ಮಗಳು ಸರ್ಕಾರಿ ಶಾಲೆಯಲ್ಲಿ ಶೇ 82 ಅಂಕ ಪಡೆದಿದ್ದಾಳೆ. ದಿನಕ್ಕೆ 4-5 ಕಾಲೇಜುಗಳಿಂದ ಕರೆ ಬರುತ್ತಿದೆ. ನಮ್ಮ ಕಾಲೇಜಿಗೆ ಸೇರಿಸಿ, ನೀಟ್-ಸಿಇಟಿ ಕೋಚಿಂಗ್ ಉಚಿತ ಎಂದು ಹೇಳುತ್ತಾರೆ. ಪದೇ ಪದೇ ಕರೆ ಮಾಡುತ್ತಿದ್ದಾರೆ’ ಎಂದು ಪೋಷಕಿ ಸೌಮ್ಯಮಧು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-36-2067715897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.