ಹುಬ್ಬಳ್ಳಿ: ‘ಇಲ್ಲಿನ ಬಿಡ್ನಾಳದ ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ ಅನ್ನು ಮೇಲ್ದರ್ಜೆಗೇರಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಶಿಕ್ಷಣ ಆರಂಭವಾಗಲಿದೆ. ಸರ್ಕಾರಿ ಕಾಲೇಜು ನಿರ್ಮಾಣವಾಗಬೇಕೆನ್ನುವ ಜನರ ಬಹುದಿನದ ಕನಸು ಈಡೇರಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ಗೆ ಈಚೆಗೆ ಭೇಟಿ ನೀಡಿ ಕಟ್ಟಡ ಹಾಗೂ ಮೂಲಸೌಕರ್ಯ ಪರಿಶೀಲಿಸಿ ಮಾತನಾಡಿದ ಅವರು, ‘ಈ ಭಾಗದಲ್ಲಿ 46ಕ್ಕೂ ಹೆಚ್ಚು ಕೊಳೆಗೇರಿ ಪ್ರದೇಶಗಳಿದ್ದು, ಸಾಕಷ್ಟು ಬಡವರು ವಾಸಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದರಿಗೆ ಖಾಸಗಿ ಶಿಕ್ಷಣ ದುಬಾರಿಯಾಗಿದೆ. ಹೀಗಾಗಿ, ಪದವಿ ಪೂರ್ವ ಕಾಲೇಜು ಮಂಜೂರಿಗೆ ಶಿಕ್ಷಣ ಸಚಿವರಲ್ಲಿ ವಿನಂತಿಸಲಾಗಿತ್ತು. ಪರಿಣಾಮ, ಪಬ್ಲಿಕ್ ಸ್ಕೂಲ್ ಅನ್ನು ಕಾಲೇಜು ಆಗಿ ಪರಿವರ್ತಿಸಿ ಆದೇಶ ಹೊರಡಿಸಲಾಗಿದೆ’ ಎಂದರು.

‘ವಾಣಿಜ್ಯ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಗಣಕ ವಿಜ್ಞಾನ ಸಂಯೋಜನೆ ಮಂಜೂರು ಮಾಡಲಾಗಿದೆ. ಪ್ರಥಮ ಭಾಷೆ ಕನ್ನಡ ಮತ್ತು ದ್ವಿತೀಯ ಭಾಷೆ ಇಂಗ್ಲಿಷ್ ಬೋಧಿಸಲು ಅವಕಾಶ ನೀಡಲಾಗಿದೆ. ಸದ್ಯ ವಾಣಿಜ್ಯ ವಿಭಾಗ ಪ್ರಾರಂಭವಾಗಿದ್ದು, ವಿಜ್ಞಾನ ವಿಭಾಗಕ್ಕೂ ಮಂಜೂರಾತಿ ನೀಡುವಂತೆ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಡಿಡಿಪಿಐ ಉಮೇಶ ಬೊಮ್ಮಕ್ಕನವರ, ಡಿಡಿಪಿಯು ತೇಜಸ್ವಿನಿ ನಾರಾಯಣಕರ, ಬಿಇಒ ಎಚ್.ಎಂ. ಪಡ್ನೀಸ್, ಮುಖಂಡರಾದ ಮೋಹನ ಅಸುಂಡಿ, ನಾಸೀರ್ ಅಸುಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-24-910675721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.