ಹುಣಸಗಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜು ಮತ್ತು ಪಟ್ಟಣದ ಕೀರ್ತಿ ಹೆಚ್ಚಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ಯಾದಗಿರಿ ರಾಮಕೃಷ್ಣ ಆಶ್ರಮದ ಪಿ.ವೇಣು ಗೋಪಾಲ ಹೇಳಿದರು.

ಪಟ್ಟಣದ ಎಸ್.ಕೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಸಮಯ ಪಾಲನೆ, ಹಿರಿಯರಿಗೆ ಗೌರವ, ಓದಿದ ಸಂಸ್ಥೆಯ ಕುರಿತು ಅಭಿಮಾನ ಸದಾ ನಿಮ್ಮದಾಗಿರಲಿ’ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಸಂತೋಷ ಮಾರ್ಟಿನ್ ಮಾತನಾಡಿ, ‘ಈ ಬಾರಿ ಪಿಯು ವಿಜ್ಞಾನ ವಿಭಾಗದ ಫಲಿತಾಂಶ ಉತ್ತಮವಾಗಿ ಬಂದಿದ್ದು, 55 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿ ಕಲ್ಪನಾ ಕನ್ನಳ್ಳಿ ಶೇ 97.33 ಅಂಕ ಗಳಿಸುವ ಮೂಲಕ ಹುಣಸಗಿ ಹಾಗೂ ಸುರಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುರುಗೆಣ್ಣ ದೇಸಾಯಿ ಅವರು ಮಾತನಾಡಿ, ‘ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಹುಣಸಗಿಯ ಐಶ್ವರ್ಯ ಚಂದ್ರಶೇಖರ್ ಶೇ 96.3 ಅಂಕ ಗಳಿಸಿದ್ದು, ಅದರಲ್ಲಿ ಗಣಿತ ವಿಷಯದಲ್ಲಿ 5 ವಿದ್ಯಾರ್ಥಿಗಳು ಶೇ 100ರಷ್ಟು ಅಂಕ ಗಳಿಸಿದ್ದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಗರಗೆಣ್ಣ ದೇಸಾಯಿ, ಹಣಮರಡ್ಡಿ ಕುಪ್ಪಿ, ವಿಜಯಕುಮಾರ ದೇಸಾಯಿ, ಸುರೇಶಬಾಬು ರಡ್ಡಿ, ಸುನೀತಾ, ಕವಿತಾ ದೇಸಾಯಿ, ಪಾಲಾಕ್ಷಯ್ಯ ಹಿರೇಮಠ, ಆರ್.ಎನ್.ಹೂಗಾರ, ರಾಘವೇಂದ್ರ ಕಾಮನಟಗಿ, ಮಲ್ಲಿಕಾರ್ಜುನ ಗುತ್ತೇದಾರ, ಸಿದ್ದನಗೌಡ ಬಿರಾದರ, ರವಿ ಬಂಟನೂರು ಸೇರಿದಂತೆ ಇತರರು ಹಾಜರಿದ್ದರು.

ಸೃಷ್ಟಿ ಸ್ವಾಗತಿಸಿದರು. ಈರಮ್ಮ ಅವರು ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-30-1054268650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.