ಹುಣಸೂರು: ಬಾಲ್ಯ ವಿವಾಹ ಧಿಕ್ಕರಿಸಿದ್ದ ರಕ್ಷಿತಾ, ಓದು ಮುಂದುವರಿಸಿ ಈ ಸಾಲಿನ ಪಿಯು ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

9 ವರ್ಷಗಳ ಹಿಂದೆ ಕುಟುಂಬದವರ ಒತ್ತಡಕ್ಕೆ ಹಸೆಮಣೆ ಏರಿದ್ದ ಕೆ.ಆರ್.ನಗರ ಬಾಲಕಿಯು ಪತಿ ಮನೆಯವರ ಹಿಂಸೆ ಸಹಿಸಲಾಗದೆ ಕೌಟುಂಬಿಕ ಕಟ್ಟುಪಾಡಿನಿಂದ ಹೊರ ಬಂದು ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಂದುವರಿಸಲು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ನೆರವಾಗಿದ್ದರು. ಹುಣಸೂರಿನ ಸರ್ಕಾರಿ ಬಾಲಕಿಯರ ಪಿಯು ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ದಾಖಲಾಗಿ 359 ಅಂಕ ಪಡೆದಿದ್ದಾರೆ.

‘ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉತ್ತಮ ಸ್ಥಾನಕ್ಕೇರುವ ಹಂಬಲವಿದೆ’ ಎಂದು ರಕ್ಷಿತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಧ್ವನಿ ಇಲ್ಲದ ಸಮುದಾಯಕ್ಕೆ ಬೆಳಕು ಸೇವಾ ಸಂಸ್ಥೆಯು ಸಹಾಯಹಸ್ತ ಚಾಚುತ್ತಿದೆ’ ಎಂದು ನಿಂಗರಾಜ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-15-809938538

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.