ಕಲಬುರಗಿ: ನಗರದ ದಾಮೋದರ ರಘೋಜಿ ಪಿಯು ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಪ್ರೇಮಾ ರಟಕಲ್ 597 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರೇಮಾ ನಗರದ ಕಾಕಡೆ ಚೌಕ್ ಪ್ರದೇಶದ ರಾಜಕುಮಾರ ರಟಕಲ್ ಹಾಗೂ ಪದ್ಮಾವತಿ ರಟಕಲ್ ಅವರ ಪುತ್ರಿ. ಪ್ರೇಮಾ ಎಸ್ಎಸ್ಎಲ್ಸಿಯಲ್ಲಿ ಶೇ70ರಷ್ಟು ಅಂಕ ಗಳಿಸಿದ್ದರು.

‘ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರಿಂದ ಖುಷಿ ಹಾಗೂ ಹೆಮ್ಮೆಯಾಗುತ್ತಿದೆ. ನಿತ್ಯ ನಾಲ್ಕು ತಾಸು ಓದುತ್ತಿದ್ದೆ. ಹೆಚ್ಚಾಗಿ ರಾತ್ರಿಯೇ ಅಧ್ಯಯನ ಮಾಡುತ್ತಿದ್ದೆ. ನಾನು 598 ಅಂಕ ನಿರೀಕ್ಷಿಸಿದ್ದೆ. ಒಂದು ಅಂಕ ಕಡಿಮೆಯಾಗಿ 597 ಅಂಕ ಬಂದಿವೆ. ನಮ್ಮ ಕಾಲೇಜಿನಲ್ಲಿ ತುಸು ಮುಂಚಿತವಾಗಿಯೇ ಪಾಠಗಳನ್ನೆಲ್ಲ ಮುಗಿಸಿದ್ದರು. ಹೀಗಾಗಿ ಬೋರ್ಡ್ ಪರೀಕ್ಷೆಗೆ ಸಿದ್ಧತೆಗೆ ಅನುಕೂಲವಾಯಿತು. ಮುಂದೆ ಕಂಪನಿ ಸೆಕ್ರೆಟರಿ ಕೋರ್ಸ್ ಓದಬೇಕು ಎಂದುಕೊಂಡಿರುವೆ’ ಎಂದು ಪ್ರೇಮಾ ಅವರು ‘ಪ್ರಜಾವಾಣಿ’ ಜೊತೆಗೆ ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳ ಸಾಧನೆ: ನಗರದ ದಾಮೋದರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆ–1ರಲ್ಲಿ ಒಟ್ಟಾರೆ ಶೇ 85ರಷ್ಟು ಫಲಿತಾಂಶ ಪಡೆದಿದೆ.

ಕಾಲೇಜಿನ 59 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 225 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 43 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ಅರ್ಥಶಾಸ್ತ್ರದ 15, ವ್ಯವಹಾರ ಅಧ್ಯಯನದಲ್ಲಿ 7, ಕನ್ನಡದಲ್ಲಿ 7, ಲೆಕ್ಕಶಾಸ್ತ್ರದಲ್ಲಿ 5, ಸಂಖ್ಯಾಶಾಸ್ತ್ರದಲ್ಲಿ 3, ಗಣಿತದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರಘೋಜಿ, ಕಾರ್ಯದರ್ಶಿ ಮೀರಾ ರಘೋಜಿ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-34-1837203667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.