ಕಲಬುರಗಿ: ‘ನಮ್ಮಲ್ಲಿ ಸೌಲಭ್ಯಗಳು ಕಡಿಮೆ ಇದ್ದರೂ, ನಮ್ಮ ಕನಸುಗಳು ದೊಡ್ಡದಾಗಿರಬೇಕು. ಪರಿಸ್ಥಿತಿ ಹೇಗಿದ್ದರೂ ಕನಸುಗಳನ್ನು ಬಿಡಬಾರದು. ಪರಿಶ್ರಮವೇ ಭವಿಷ್ಯವನ್ನು ನಿರ್ಮಿಸುತ್ತದೆ’ ಎಂದು ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಸೃಷ್ಟಿ ಮಲ್ಲಿನಾಥ ಪಾಟೀಲ ಹೇಳಿದರು.

ನಗರದ ಸಂತೋಷ ಕಾಲೊನಿಯ ಕೆಎಚ್ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಡಾವಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಪರಿಶ್ರಮವಾದಿಗಳ ಫಲವತ್ತಾದ ಭೂಮಿಯಾಗಿದೆ. ನನ್ನ ತಂದೆ–ತಾಯಿಯ ತ್ಯಾಗ, ಗುರುಗಳ ಮಾರ್ಗದರ್ಶನ ಸಾಧನೆಗೆ ಸ್ಫೂರ್ತಿಯಾಯಿತು’ ಎಂದರು.

ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಶಿಕ್ಷಣ ಪ್ರೇಮಿ ಸಂಗಮೇಶ ಸರಡಗಿ, ವಕೀಲ ಹಣಮಂತರಾಯ ಅಟ್ಟೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಬುಜ್ಜಿ, ಬಸವರಾಜ ಹೆಳವಾರ, ದಿಲೀಪಕುಮಾರ ಭಕ್ರೆ, ಸಂಜೀವಕುಮಾರ ಮಡ್ದೆ, ಬಸವರಾಜ ಕೊರಳ್ಳಿ, ಸೂರ್ಯಕಾಂತ ಸಾವಳಗಿ, ಹಣಮಂತ ಪೂಜಾರಿ, ಸಾಯಿ ಟೇಲರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-34-1082525098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.