ಕಲಬುರಗಿ: ಪ್ರಸಕ್ತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–1ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿಯ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ ಪಾಟೀಲ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಐತಿಹಾಸ ‘ಸೃಷ್ಟಿ’ಸಿದ್ದಾರೆ.

ನಗರದ ಎಚ್ಕೆಇ ಸೊಸೈಟಿಯ ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, 600ಕ್ಕೆ 598 ಅಂಕ ಗಳಿಸಿದ್ದಾರೆ. ವಿ.ಜಿ. ಮಹಿಳಾ ಕಾಲೇಜಿನ ಇತಿಹಾಸದಲ್ಲಿ ವಿದ್ಯಾರ್ಥಿನಿಯೊಬ್ಬರು ರಾಜ್ಯಕ್ಕೆ ಟಾಪರ್ ಆಗಿದ್ದು ಇದೇ ಮೊದಲು.

ಪ್ರಸಕ್ರ ವರ್ಷದ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಯು ಈ ಸಲ ಎರಡು ಸ್ಥಾನ ಜಿಗಿತ ಕಂಡು ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಏರಿದೆ. ರಾಜ್ಯದ ಫಲಿತಾಂಶವು ಈ ಸಲ ಶೇ 13ರಷ್ಟು ಹೆಚ್ಚಳ ಕಂಡರೆ, ಕಲಬುರಗಿ ಜಿಲ್ಲೆಯು ದಾಖಲೆಯ ಶೇ 21ರಷ್ಟು ಜಿಗಿತ ಕಂಡಿರುವುದು ಗಮನಾರ್ಹ.

ಕಳೆದ ವರ್ಷ ಕಲಬುರಗಿ ಜಿಲ್ಲೆಯು ಶೇ 55.70ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 31ನೇ ಸ್ಥಾನ ಪಡೆದಿತ್ತು.

ಪ್ರಸಕ್ತ ವರ್ಷದ ಫೆಬ್ರುವರಿ 28ರಿಂದ ಮಾರ್ಚ್ 17ರ ತನಕ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿದ್ದವು. ಪ್ರಸಕ್ತ ವರ್ಷ ರೆಗ್ಯುಲರ್ನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಒಟ್ಟು 23,801 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 18,322 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ76.98ರಷ್ಟು ಫಲಿತಾಂಶ ದಾಖಲಾಗಿದೆ.

ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಪೈಕಿ 5,479 ಮಂದಿ ಅನುತ್ತೀರ್ಣರಾಗಿದ್ದಾರೆ. ರೆಗ್ಯುಲರ್, ರಿಪೀಟರ್ಸ್ ಹಾಗೂ ಖಾಸಗಿ ಸೇರಿ ಒಟ್ಟು ಒಟ್ಟಾರೆ ಫಲಿತಾಂಶವು ಶೇ 66.80ರಷ್ಟಿದೆ.

ಕಲಾ ವಿಭಾಗದಲ್ಲಿ 7,083 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 4,377 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ 66.82ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 3,231 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 2,509 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 77.65ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ 13,487 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 11,080 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 82.15ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಬಾಲಕಿಯರೇ ಮೇಲುಗೈ: ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ವರ್ಷವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ71.31ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾದರೆ, ಶೇ 61.03ರಷ್ಟು ಬಾಲಕರು ಮಾತ್ರವೇ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ 61.04 ಬಾಲಕಿಯರು, ಶೇ 43.56 ರಷ್ಟು ಬಾಲಕರು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 75.86ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ 54.04 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ 76.95ರಷ್ಟು ಬಾಲಕಿಯರು ಹಾಗೂ ಶೇ 73.35ರಷ್ಟು ಬಾಲಕರು ಪಾಸ್ ಆಗಿದ್ದಾರೆ.

ಗ್ರಾಮೀಣ ಮಕ್ಕಳು ಮೇಲುಗೈ: ಈ ಸಲದ ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ. ಪರೀಕ್ಷೆ ಎದುರಿಸಿದ ಗ್ರಾಮೀಣ ಭಾಗದ 5,135 ವಿದ್ಯಾರ್ಥಿಗಳ ಪೈಕಿ 4,029 ಮಕ್ಕಳು ಪಾಸಾಗಿದ್ದು ಶೇ 78.46ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ನಗರ ಪ್ರದೇಶದಲ್ಲಿ 18,666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 14,293 ಮಕ್ಕಳು ಪಾಸಾಗಿದ್ದು, ಶೇ 76.57ರಷ್ಟು ಫಲಿತಾಂಶ ಪಡೆದಿದ್ದಾರೆ. ನಗರ ಪ್ರದೇಶದ 4,373 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-34-1877087605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.