ಕಲಬುರಗಿ: ನಗರದ ಸಂತ ಜೋಸೆಫ್ ಪಿಯು ಕಾಲೇಜಿಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗಕ್ಕೆ ಶೇ 97, ಕಲಾ ವಿಭಾಗಕ್ಕೆ ಶೇ 100, ವಾಣಿಜ್ಯ ವಿಭಾಗಕ್ಕೆ ಶೇ 90ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 67 ವಿದ್ಯಾರ್ಥಿನಿಯರಲ್ಲಿ 65 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಇದರಲ್ಲಿ 19 ವಿದ್ಯಾರ್ಥಿನಿಯರು ಅಗ್ರಶ್ರೇಣಿ, 41 ಪ್ರಥಮ ಶ್ರೇಣಿ, 5 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಝಾಹಿದಾ ರಿಮಾ ಶೇ 98.16ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುರಿಯಾ ಅಂಜುಮ್ ಶೇ 96.83, ಸಯಿಮಾ ಸುಲ್ತಾನಾ ಶೇ 93.8, ಇಫಥ ಫಾತಿಮಾ ಶೇ 92.5, ಅಮೂಲ್ಯಾ ಸಿ. ಶೇ 91.05, ರೂಹಿನಾ ಬೇಗಂ ಶೇ 90.6, ರಜೀಯಾ ಶೇ 90.3, ಹುದಾ ಬೇಗಂ ಶೇ 90.1ರಷ್ಟು ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಪ್ರತಿಶತ ಫಲಿತಾಂಶ ಬಂದಿದೆ.

4 ವಿದ್ಯಾರ್ಥಿನಿಯರು ಅಗ್ರ ಶ್ರೇಣಿ, 11 ಪ್ರಥಮ ಶ್ರೇಣಿ, ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಭೂಮಿಕಾ ಎಸ್ ಶೇ 93.5 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಚೇತನಾ ಶೇ 92.8ರಷ್ಟು ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಯಿಮಾ ಸುಲ್ತಾನಾ ಶೇ 86ರಷ್ಟು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯೆ ಸಿಸ್ಟರ್ ಶರಣಲತಾ, ಉಪಪ್ರಾಚಾರ್ಯ ಚಿ.ಸಿ. ನಿಂಗಣ್ಣ ಹರ್ಷ ವ್ಯಕ್ತಪಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-34-315695299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.