ಕಳಸ: ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಗೌಡಲು ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿನ ಕಳಸ ತಾಲ್ಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜನಪದ ಕಲೆಯಾದ ಅಂಟಿಕೆ ಪಿಂಟಿಕೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದ ಅಧಿಕಾರಿ ಡಾ.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬುಡಕಟ್ಟು ಪಂಗಡಗಳ ಮಕ್ಕಳು ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು ಎಂದರು.

ಧ್ವನಿ ಕಾನೂನು ಜಾಗೃತಿ ಟ್ರಸ್ಟ್ ಸಂಸ್ಥಾಪಕ ಕೆ.ಎಲ್.ಕಾರ್ತಿಕ್ ಮಾತನಾಡಿ, ಬುಡಕಟ್ಟು ಜನರ ಹಕ್ಕುಗಳು ಮತ್ತು ಈ ಸಮುದಾಯದ ಏಳ್ಗೆಗೆ ಸಮಾಜದಲ್ಲಿ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.

ಕಿರುತೆರೆ ಕಲಾವಿದ ಗಜೇಂದ್ರ ಮರಸಣಿಗೆ, ಯಕ್ಷಗಾನ ಕಲಾವಿದೆ ಗಿರಿಜಾ ಗೋಪಾಲ ಬೇಡಕ್ಕಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಅನಿಲ್ ಮುಜೇಕಾನು, ಕಾರ್ಯದರ್ಶಿ ಕುಕ್ಕೋಡು ಗಣೇಶ್, ಖಜಾಂಜಿ ಬಾಲಕೃಷ್ಣ, ಶಿಕ್ಷಕರಾದ ಶಿವಪ್ಪ, ರಾಜೇಶ್ ಮಲಗಾರು, ಸುಧಾಕರ ಹುಲ್ಲಿನುಡಿಗೆ, ಮೇಘಾನಂದ ಬೇಡಕ್ಕಿ, ದಿನೇಶ್ ಎಸ್.ಕೆ.ಮೇಗಲ್, ಸುರೇಶ್ ಕೆರ್ನಾಳಿ, ನಾಗೇಂದ್ರ ಮುಜೇಕಾನು, ರೇವತಿ, ಸುರೇಶ್ ಬಿಳಿಗಲ್, ಸತೀಶ್ ಒಡ್ಡಿಕಟ್ಟೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-126-1304754171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.