ಕೋಲಾರ: ದ್ವಿತೀಯ ಪಿಯುಸಿ 2025–26ನೇ ಸಾಲಿನ ಪರೀಕ್ಷೆ ಫಲಿತಾಂಶದಲ್ಲಿ ಮರು ಮೌಲ್ಯಮಾಪನದ ಬಳಿಕ ನಗರದ ಮಹಿಳಾ ಸಮಾಜ ಪಿಯು ಕಾಲೇಜಿನ ಗೀತಾ ಎನ್. ರಾಜ್ಯಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕ (99.66) ಪಡೆದು ಜಿಲ್ಲೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅರ್ಥಶಾಸ್ತ್ರ (100), ಬ್ಯುಸಿನೆಸ್ ಸ್ಟಡಿ (100), ಅಕೌಂಟೆನ್ಸಿ (100), ಸ್ಟ್ಯಾಟಿಸ್ಟಿಕ್ಸ್ (100), ಕನ್ನಡ (100) ಹಾಗೂ ಇಂಗ್ಲಿಷ್ನಲ್ಲಿ (98) ಉತ್ತಮ ಅಂಕ ಸಂಪಾದಿಸಿದ್ದಾರೆ. ಫಲಿತಾಂಶ ಪ್ರಕಟವಾದಾಗ ಅವರು 594 ಅಂಕ (ಶೇ 99) ಪಡೆದಿದ್ದರು. ಇಂಗ್ಲಿಷ್ನಲ್ಲಿ 96 ಹಾಗೂ ಕನ್ನಡದಲ್ಲಿ 98 ಅಂಕ ಬಂದಿತ್ತು. ಮೌರುಮಾಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 4 ಅಂಕ ಲಭಿಸಿವೆ.

ಅವರು ಬಂಗಾರಪೇಟೆಯ ನಾಗರಾಜ್ ಹಾಗೂ ವೇದಾವತಿ ಅವರ ಪುತ್ರಿ. ಈ ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಂಶುಪಾಲರಾದ ನವೀನಾ ಹಾಗೂ ಉಪನ್ಯಾಸಕರು ಬುಧವಾರ ಸನ್ಮಾನಿಸಿದರು.

ಚೆನ್ನಾಗಿ ಪರೀಕ್ಷೆ ಬರೆದಿದ್ದೆ. ಹೆಚ್ಚು ಅಂಕ ಬರಲಿದೆ ಎಂಬ ವಿಶ್ವಾಸವಿತ್ತು. ಹೀಗಾಗಿ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದೆ. ಹೆಚ್ಚುವರಿಯಾಗಿ 4 ಅಂಕ ಲಭಿಸಿರುವುದು ಖುಷಿ ನೀಡಿದೆ. ಕಾಲೇಜಿನವರು ಹಾಗೂ ಪೋಷಕರು ತುಂಬಾ ಸಹಕಾರ ನೀಡಿದರು ಎಂದು ಗೀತಾ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-18-1195954882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.