ಕೊಪ್ಪ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ (ಕಾಲೇಜು ವಿಭಾಗ) ಪ್ರಥಮ ಪಿಯು ತರಗತಿಗೆ ದಾಖಲಾತಿ ಆರಂಭಿಸಿದ್ದು, ವಿದ್ಯಾರ್ಥಿಗಳು ದಾಖಲಾಗಿರುವುದಕ್ಕೆ ಯಾವುದೇ ದಾಖಲೆ ಕೊಟ್ಟಿಲ್ಲ ಎಂದು ಪೋಷಕರು ದೂರಿದ್ದಾರೆ.

‘ಹಣ ಪಾವತಿಸಿದ ದಾಖಲಾತಿ ಮಾಡಿದ್ದರೂ ರಶೀದಿ ಕೇಳಿದರೆ ಸರ್ಕಾರದಿಂದ ಇನ್ನೂ ಬಂದಿಲ್ಲ, ಬಂದ ನಂತರ ಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಪ್ರಾಂಶುಪಾಲ ರಮೇಶ್ ಕೆ.ಟಿ. ಅವರನ್ನು ಪ್ರಶ್ನಿಸಿದಾಗ, ‘ಸರ್ಕಾರದಿಂದ ರಶೀದಿ ಪುಸ್ತಕ ಬಂದಿಲ್ಲ. ಬಂದ ಕೂಡಲೇ ವಿತರಿಸುತ್ತೇವೆ. ಪೋಷಕರು ಮಕ್ಕಳಿಗೆ ಸೀಟು ಸಿಗುವುದಿಲ್ಲ ಎಂಬ ಆತಂಕದಿಂದ ದಾಖಲಾತಿಗೆ ಬರುತ್ತಿದ್ದಾರೆ. ಅಂಥವರಿಗೆ ವಿದ್ಯಾರ್ಥಿನಿಲಯ ಮತ್ತಿತರ ಕಡೆಗೆ ದಾಖಲೆ ಕೇಳಿದರೆ ವ್ಯಾಸಂಗ ದೃಢೀಕರಣ ಪತ್ರ ನೀಡುತ್ತೇವೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-126-1166671357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.