ನರಸಿಂಹರಾಜಪುರ: ಪಟ್ಟಣದ ಎಂ.ಕೆ.ಸಿ.ಪಿ.ಎಂ (ಶಾರದಾ ವಿದ್ಯಾಮಂದಿರ) ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಬೆನಿಟ್ ಮತ್ತು ಬ್ರೀಟಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆದಿದ್ದಾರೆ.

ಫಲಿತಾಂಶ ಪ್ರಕಟ ವಾದಾಗ ಬೆನಿಟ್ಗೆ 577 ಅಂಕ ಬಂದಿತ್ತು. ಇಂಗ್ಲಿಷ್ ಪತ್ರಿಕೆ ಮರುಮೌಲ್ಯಮಾಪನಕ್ಕೆ ಹಾಕಿದಾಗ 9 ಅಂಕ ಹೆಚ್ಚು ದೊರೆಯಿತು. ಇದರಿಂದ ಅವರು 586 ಅಂಕಗಳನ್ನು ಗಳಿಸಿ, ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಹೋದರಿ ಬ್ರೀಟಾಗೆ ಫಲಿತಾಂಶ ಪ್ರಕಟವಾದಾಗ 578 ಅಂಕ ಬಂದಿತ್ತು. ಇಂಗ್ಲಿಷ್ ಪತ್ರಿಕೆ ಮರುಮೌಲ್ಯಮಾಪನಕ್ಕೆ ಹಾಕಿದಾಗ 2 ಅಂಕ ಹೆಚ್ಚುವರಿ ದೊರೆತು, 580 ಅಂಕಗಳನ್ನು ಗಳಿಸಿದ್ದಾರೆ.

ಎಸ್.ಎಸ್.ಎಲ್.ಸಿ (ಸಿಬಿಎಸ್ಸಿ)ಯಲ್ಲಿ ಈ ಅವಳಿ ಸಹೋದರಿಯರು ಶೇ 90 ಅಂಕ ಪಡೆದಿದ್ದಾರೆ. ಬೆನಿಟ್ ವೈದ್ಯಕೀಯ ಕೋರ್ಸ್ ಮಾಡುವ ಗುರಿಹೊಂದಿದ್ದರೆ, ಬ್ರೀಟಾ ಬಿಎಸ್ಸಿ ನರ್ಸಿಂಗ್ ಮಾಡುವ ಗುರಿ ಹೊಂದಿದ್ದಾರೆ.

ಮೆಣಸೂರು ಗ್ರಾ.ಪಂ. ವ್ಯಾಪ್ತಿಯ ಬಡಗಬೈಲು ಗ್ರಾಮದ ದಾಸನಗದ್ದೆಯಲ್ಲಿ ವಾಸಿ, ಬೇಬಿ ಮತ್ತು ಜೋಸಿ ದಂಪತಿಯ ಪುತ್ರಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-126-173969073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.