ರಾಣೆಬೆನ್ನೂರು: ನಗರದ ಹುಣಸೀಕಟ್ಟಿ ರಸ್ತೆಯ ಖನ್ನೂರ ವಿದ್ಯಾನಿಕೇತನ ಪಿಯು ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ವಿದ್ಯಾರ್ಥಿ ಶಂಭುಲಿಂಗ ಸುಂಕದ ಅವರು 593 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಖನ್ನೂರ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ವೈದ್ಯ ಡಾ. ಪ್ರವೀಣ ಎಂ .ಖನ್ನೂರ ತಿಳಿಸಿದರು.

ಇಲ್ಲಿನ ವಿನಾಯಕನಗರದ ಖನ್ನೂರು ಸ್ಕೂಲ್ ಆವರಣದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೊದಲು ಫಲಿತಾಂಶದಲ್ಲಿ 588 ಅಂಕ ಪಡೆದಿದ್ದರು. ಮರು ಮೌಲ್ಯಮಾಪನ ಮಾಡಿಸಿದಾಗ 5 ಅಂಕಗಳು ಹೆಚ್ಚುವರಿಯಾಗಿ ಬಂದು 593 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ 7 ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ ಎಂದರು.

ಕಾಲೇಜಿನ ಸರಾಸರಿ ಫಲಿತಾಂಶ ಶೇ 94 ರಷ್ಟು ಆಗಿದೆ. ಒಟ್ಟು 195 ವಿದ್ಯಾರ್ಥಿಗಳ ಪೈಕಿ 183 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇದರಲ್ಲಿ 65 ಶ್ರೇಣಿ, 96 ಪ್ರಥಮ, 22 ದ್ವಿತೀಯ ಸ್ಥಾನಗಳಲ್ಲಿ ಪಾಸಾಗಿದ್ದಾರೆ. ಖನ್ನೂರ ವಸತಿ ನಿಲಯದಲ್ಲಿದ್ದ 85 ವಿದ್ಯಾರ್ಥಿಗಳ ಪೈಕಿ 85 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷ ರಾಜ್ಯಕ್ಕೆ 3ನೇ ರ್ಯಾಂಕ್ ಬರುವಲ್ಲಿ ಖನ್ನೂರ ಪಿಯು ಕಾಲೇಜ ಯಶಸ್ವಿಯಾಗಿತ್ತು. ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ವೈದ್ಯೆ ಡಾ. ಶೈಲಶ್ರೀ ಪ್ರವೀಣ, ಪ್ರಾಚಾರ್ಯ ಕೆ. ಸುಬ್ಬರಾವ್, ಮುಖ್ಯಶಿಕ್ಷಕಿ ಬೆರಿಲ್ ದಾಸನ್, ಹನುಮಂತ ಮಕರಿ ಹಾಗೂ ಉಪನ್ಯಾಸಕರು, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-22-1814341854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.