ಶಿಡ್ಲಘಟ್ಟ: ಅರೋಗ್ಯ ಇಲ್ಲದ ಮೇಲೆ ಎಷ್ಟೇ ಸಂಪತ್ತು ಇದ್ದರೂ ಅದು ತೃಣಮಾತ್ರ. ಏನೇನೆಲ್ಲಾ ಗಳಿಸುವ ಮೊದಲು ಆರೋಗ್ಯ ಗಳಿಸಿ ಎಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್ ಸದಸ್ಯ ಡಾ.ಆಂಜನಪ್ಪ ಹೇಳಿದರು.

ಡಾಲ್ಫಿನ್ಸ್ ಕಾಲೇಜಿನಲ್ಲಿ ನಡೆದ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಪರಿಚಯಂ 2026ರಲ್ಲಿ ಮಾತನಾಡಿದರು.

ವೇಗವಾಗಿ ತಿನ್ನುವುದು, ಕುರುಕಲು ತಿನ್ನುವುದು ಮತ್ತು ಮಾನಸಿಕ ಒತ್ತಡ ರೋಗಗಳಿಗೂ ಕಾರಣವಾಗುತ್ತಿವೆ. ಹಾಗಾಗಿ ತಿನ್ನುವ ವಿಧಾನ ಮತ್ತು ತಿನ್ನುವ ಆಹಾರದ ಮೇಲೆ ಎಚ್ಚರಿಕೆ ಇರಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಕ್ಷೇತ್ರವನ್ನು ಹೆಚ್ಚೆಚ್ಚು ಪ್ರವೇಶಿಸಬೇಕು ಎಂದರು. ಡಾಲ್ಫಿನ್ಸ್ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ ಮಾತನಾಡಿ, ಪೈಪೋಟಿಗೆ ಬಿದ್ದು ವಿದ್ಯಾರ್ಥಿಗಳಿಗೆ ಆಮಿಷಗಳನ್ನೊಡ್ಡುವ ಮೂಲಕ ದಾರಿ ತಪ್ಪಿಸುವ ಕೆಲಸವನ್ನು ಕೆಲ ಕಾಲೇಜುಗಳು ಮಾಡುತ್ತಿರುವುದು ಆತಂಕಕಾರಿ ವಿಚಾರ ಎಂದರು. ಗುಣಮಟ್ಟದ ಶಿಕ್ಷಣದ ಜತೆಗೆ ನೀಟ್, ಕೆಸಿಇಟಿ ಮತ್ತು ಜೆಇಇ ಪರೀಕ್ಷೆಗಳಿಗೆ ಪೂರ್ಣ ಮಟ್ಟದ ತರಬೇತಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಸದುಪಯೋಗಪಡಸಿಕೊಳ್ಳಬೇಕು ಎಂದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ಮಾತನಾಡಿ, ಎಲ್ಲಿ ಶ್ರಮ ಮತ್ತು ಶ್ರದ್ಧೆ ಇರುತ್ತದೆಯೋ ಅಲ್ಲಿ ಯಶಸ್ಸು ಇರುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಷ್ಟೂ ಗುರಿಗೆ ಹತ್ತಿರವಾಗುತ್ತಾರೆ. ಪುಸ್ತಕಗಳ ಮುಂದೆ ತಲೆ ತಗ್ಗಿಸಿದಷ್ಟೂ ಬದುಕಿನಲ್ಲಿ ತಲೆ ಎತ್ತುತ್ತಾರೆ. ಹಾಗಾಗಿ ಮೊಬೈಲ್ಗೆ ದೂರವಾಗಿ, ಪುಸ್ತಕಗಳಿಗೆ ಹತ್ತಿರವಾಗಿ ಎಂದು ಕರೆ ಕೊಟ್ಟರು. ಪ್ರಾಂಶುಪಾಲ ಪ್ರೊ. ಎನ್.ಶ್ರೀನಿವಾಸಮೂರ್ತಿ, ಸಿರಿಸಿಂಚನ, ಕೌಸರ್, ಅಫ್ಷಾಫಾತೀಮ, ಭವ್ಯ, ವರ್ಷ, ಲಿಖಿತ, ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-16-1136091267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.