ಶಿಗ್ಗಾವಿ: ‘ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಖ್ಯ. ಬಡಕೂಲಿಕಾರರ ಮಕ್ಕಳು ಪರಿಶ್ರಮ ವಹಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅದಕ್ಕೆ ಬೆಂಬಲವಾಗಿ ನಮ್ಮ ಸಂಸ್ಥೆ ನಿಂತಿದೆ’ ಎಂದು ಬಂಕಾಪುರ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಹುಸೇನ್ ಖತೀಬ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಣಣದ ಎಸ್.ಎ.ಕ್ಯೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ದ್ವಿತೀಯ ವರ್ಷದ ಪಿಯು ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಅದರಿಂದ ಇನ್ನಷ್ಟು ಸೌಲಭ್ಯ ನೀಡಲು ಸಾಧ್ಯವಿದೆ. ಈಗಾಗಲೆ ಹೆಚ್ಚುವರಿ ಕೊಠಡಿಗಳನ್ನು ನೀಡಲಾಗಿದೆ. ಅದರಿಂದ ಮಕ್ಕಳ ಶೈಕ್ಷಣಿಕ ಸುಧಾರಣೆ ಸಾಧ್ಯವಿದೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಮಹಮ್ಮದತಮೀದ್ ಖಾಜಿ ಮಾತನಾಡಿ, ‘ಬಡಕೂಲಿಕಾರರ ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದೆ. ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುವ ಕೆಲಸ ನಮ್ಮದಾಗಿದೆ. ಪರಿಶ್ರಮ ಇದ್ದಲ್ಲಿ ಯಶಸ್ಸು ಇದೆ ಎಂಬುವುದನ್ನು ಸಾಧಿಸಿ ತೋರಿದ್ದಾರೆ. ಅದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ’ ಎಂದರು.

ಮುಖಂಡ ಅಬ್ದುಲ್ ರಹೆಮಾನ್ ಪಟೇಲ್ ಮಾತನಾಡಿದರು. ಸಂಸ್ಥೆ ಸದಸ್ಯರಾದ ಅಯೂಭಖಾನ್ ಪಠಾಣ, ಕಲಂದರ ಜಂಗಳಿ, ಇಖಾಕಅಹ್ಮದ ಪಟೇಲ್, ಅಬ್ದಲ್ ಅಜೀಜ ಖತೀಬ, ಅಬ್ದುಲಮುನಾಫ್ ಡಾಣೆಬಾಗ, ಇಮ್ತಿಯಾಜ್ ಅಹಮ್ಮದ ಭಟ್ಟಿಪುರಿ, ಕಾಲೇಜಿನ ಪ್ರಾಚಾರ್ಯ ತೈಕೇರ್ಖಾನ್ ಪಠಾಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-22-1759777275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.