ಇಂಡಿ: ಗ್ರಾಮೀಣ ಪ್ರದೇಶದ ಮಕ್ಕಳ ವ್ಯಾಸಂಗಕ್ಕಾಗಿ ತಾಲ್ಲೂಕಿನಲ್ಲಿ ಶಿರಶ್ಯಾಡ ಸೇರಿದಂತೆ ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿ ಸಿಕ್ಕಿದೆ.

ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಹೊಸಮನಿ ಅವರು ಸರಸ್ವತಿಗೆ ಪೂಜೆ ಸಲ್ಲಿಸುವ ಮೂಲಕ ಮಹಾವಿದ್ಯಾಲಯಕ್ಕೆ ಮಂಗಳವಾರ ಚಾಲನೆ ನೀಡಿದರು.

ಶಿರಶ್ಯಾಡ ಗ್ರಾಮದ ಉಪನ್ಯಾಸಕ ಸಿ.ಎನ್. ಪೂಜಾರಿ ಮಾತನಾಡಿ, ‘ಶಿರಶ್ಯಾಡದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಿಂದಗಿ ಅಥವಾ ಇಂಡಿಗೆ ಹೋಗಬೇಕಾಗಿತ್ತು. ಈಗ ಅನುಕೂಲವಾಗಲಿದೆ’ ಎಂದರು.

ಕಾಂಗ್ರೆಸ್ ಧುರೀಣ ಚಂದ್ರಶೇಖರ ಪಾಸೋಡಿ ಮಾತನಾಡಿ, ‘ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹಡಲಸಂಗ, ಬಸನಾಳ ಮತ್ತು ಶಿರಶ್ಯಾಡ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ತಂದು ಅನುಕೂಲ ಮಾಡಿದ್ದಾರೆ’ ಎಂದರು.

ನಿವೃತ್ತ ಉಪನ್ಯಾಸಕ ಎಸ್.ಎಸ್. ಮಜ್ಜಗಿ, ಆರ್.ಆರ್. ಬಗಲಿ, ವಿಜಯಕುಮಾರ ಬೆಕಿನಾಳ, ಅಣ್ಣಾರಾಯ ಬಿರಾದಾರ ಮಾತನಾಡಿದರು. ಮುಖ್ಯಗುರು ಎಂ.ವೈ. ಉಪ್ಪಾರ, ಎನ್.ಎಸ್. ತೆಗ್ಗೆಳ್ಳಿ, ಸತೀಶ ಈಶ್ವರಗೊಂಡ, ಪಿಡಿಒ ಮುತ್ತಪ್ಪ ಜಾಡದ, ಪ್ರಕಾಶ ಬಿರಾದಾರ, ಸಂಜೀವಕುಮಾರ ಬಿರಾದಾರ, ಅರವಿಂದ ಬಿರಾದಾರ, ಭೂಮಣ್ಣ ನಾಟಿಕಾರ, ಸುಭಾಸ ಪವಾರ, ಶ್ರೀಶೈಲ ಬಗಲಿ, ರಾಜಕುಮಾರ ಪಾಸೋಡಿ, ಈಶ್ವರಗೌಡ ಬಗಲಿ, ರಾಮ ನಾಟಿಕಾರ, ರಾಘು ತಡ್ಲಗಿ, ಯಶವಂತ ತೆಲಗ, ಊರಿನ ಶಿಕ್ಷಣ ಪ್ರೇಮಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-26-2095185118

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.