ಸಿಂಧನೂರು: ನಗರದ ಎಕ್ಸ್ಲೆಂಟ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಉತ್ತಮ ಫಲಿತಾಂಶ ತಂದಿದ್ದಾರೆ ಎಂದು ಪ್ರಾಚಾರ್ಯ ಮಂಜುನಾಥ ಸೋಮಲಾಪುರ ತಿಳಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು,‘ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಈ ಬಾರಿ 80 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 175 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಷಯವಾರು ಅಂಕಗಳಲ್ಲಿ ಕನ್ನಡ 8, ಭೂಗೋಳಶಾಸ್ತ್ರ 14, ಶಿಕ್ಷಣಶಾಸ್ತ್ರ 4, ವ್ಯವಹಾರ ಅಧ್ಯಯನ 2, ಅರ್ಥಶಾಸ್ತ್ರ 1, ರಾಜ್ಯಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಸೌಮ್ಯ 600ಕ್ಕೆ 586 (ಶೇ 97.66), ಸಾನಿಯಾ 580 (ಶೇ 96.66), ರಾಜೇಶ ಕುಮಾರ 577 (ಶೇ 96.16), ಚಂದ್ರಮ್ಮ 576 (ಶೇ 96), ತಸ್ಲಿಮಾ 570 (ಶೇ 95), ಶಾಂಭವಿ 569 (ಶೇ 94.83), ಪವಿತ್ರಾ 566 (ಶೇ 94.33), ಕಲಾ ವಿಭಾಗದಲ್ಲಿ ಸಿಂಧೂ 570 (ಶೇ 95.83), ಶಿವರಾಜ 569 (ಶೇ 94.83), ಜಾವೇದ್ 568 (ಶೇ 94.66), ಸವಿತಾ 568 (ಶೇ 94.66), ಖಾಜಾ ಬಾನು 565 (ಶೇ 94.16) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ವೆಂಕಟರಾವ್.ಎಂ, ಆಡಳಿತಾಧಿಕಾರಿ ಏಕಾಂಬರೇಶ್ವರಿ.ಎಂ ಸೇರಿದಂತೆ ಉಪನ್ಯಾಸಕ ವರ್ಗ ಹರ್ಷ ವ್ಯಕ್ತಪಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-32-644517951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.