ಸಿಂಧನೂರು: ‘ರಾಜ್ಯದಾ ದ್ಯಂತ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ತಾಲ್ಲೂಕಿನಲ್ಲೂ ಆರಂಭಿಸಲಾಗಿದ್ದು, ಬಡ ಮತ್ತು ಮಧ್ಯಮ ವರ್ಗದವರು ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು’ ಎಂದು ಪ್ರಾಚಾರ್ಯ ಎಸ್.ಶಿವರಾಜ ಮನವಿ ಮಾಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ತಾಲ್ಲೂಕಿನಲ್ಲಿ 8 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಪ್ರಸ್ತುತ ವರ್ಷದಲ್ಲಿ ಸಿಂಧನೂರು ನಗರದಲ್ಲಿ ಆದರ್ಶ ವಿಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ತಿಡಿಗೋಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಆರಂಭಗೊಂಡಿವೆ’ ಎಂದರು.

ಪ್ರಾಚಾರ್ಯ ಶೇಖರಯ್ಯಸ್ವಾಮಿ ಮಾತನಾಡಿ,‘2025-26ನೇ ಸಾಲಿನಲ್ಲಿ ಗೋನವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ’ ಎಂದು ಹೇಳಿದರು.

ವಿಶೇಷವಾಗಿ 2026-27ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭವಾದ ಆದರ್ಶ ವಿಜ್ಞಾನ ಕಾಲೇಜು ಸಿಂಧನೂರು ಹಾಗೂ ತಿಡಿಗೋಳದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಕಾಮರ್ಸ್ ಸಂಯೋಜನೆ ಪ್ರಾರಂಭಗೊಂಡಿದೆ. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅರ್ಹ ಮತ್ತು ಅನುಭವಿ ಉಪನ್ಯಾಸಕರಿದ್ದಾರೆ. ಪ್ರವೇಶಕ್ಕಾಗಿ ಮೇ 25ರಿಂದ ಎಲ್ಲ ಉಪನ್ಯಾಸಕರು ಕಾಲೇಜುಗಳಲ್ಲಿ ಲಭ್ಯವಿರುತ್ತಾರೆ. ಇದರ ಸದುಪಯೋಗ ಪಡೆದು ತಮ್ಮ ಹತ್ತಿರದ ಸರ್ಕಾರಿ ಕಾಲೇಜುಗಳಲ್ಲಿ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈಗ ನಡೆದಿರುವ ‘ಬೋಧನೆ ನಮ್ಮದು-ಸಾಧನೆ ನಿಮ್ಮದು’ ಎಂಬ ಘೋಷವಾಕ್ಯದ ದಾಖಲಾತಿ ಆಂದೋಲನದಲ್ಲಿ ದಾಖಲಾತಿ ಪಡೆದುಕೊಂಡು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಾಚಾರ್ಯರಾದ ಬಸಪ್ಪ ಕೆ.ಹೊಸಮನಿ, ಚನ್ನಬಸಮ್ಮ, ಉಪನ್ಯಾಸಕರಾದ ಹುಸೇನಪ್ಪ ಅಮರಾಪುರ, ಹುಡಸಪ್ಪ ಹುಡಸೂರು, ಶಾಂತಿ, ಸಿದ್ದನಗೌಡ, ಬಸವರಾಜ ಯಲಬುರ್ಗಿ, ಶರಣಪ್ಪ ಹೊಸಳ್ಳಿ, ಕಾಳಿಂಗ ರೆಡ್ಡಿ, ವೆಂಕಟೇಶ ಬುಕ್ಕನಹಟ್ಟಿ, ಶಿವರಾಜ ಗೋನಾಳ, ರವಿಕುಮಾರ ಸಾಸಲಮರಿ, ನಾಗರೆಡ್ಡೆಪ್ಪ ಎಲೆಕೂಡ್ಲಿಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-32-1844987842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.