ತಿ.ನರಸೀಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲ್ಲೂಕಿನ ಬನ್ನೂರು ಪಟ್ಟಣದ ವಿವೇಕಾನಂದ ಕಾಲೇಜಿಗೆ ಶೇ 100 ರಷ್ಟು ಫಲಿತಾಂಶ ದೊರಕಿದೆ.

ಪರೀಕ್ಷೆಗೆ ಹಾಜರಾಗಿದ್ದ 363 ವಿದ್ಯಾರ್ಥಿಗಳಲ್ಲಿ 115 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 196 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಜಯಶ್ರೀ.ಎಸ್ 593 ಅಂಕ ಪಡೆದು ಮೈಸೂರು ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿದ್ದು, ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಶಿವಕುಮಾರ್ ಎಚ್.ಆರ್. (588) ಸಂಕಲ್ಪ (583) ವಾಣಿಜ್ಯ ವಿಭಾಗದಲ್ಲಿ ಆಕಾಶ್ (588) ವರಲಕ್ಷ್ಮೀ (587) ಜಯಲಕ್ಷ್ಮಿ (586) ರಕ್ಷಿತ ( 585), ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು.

ಕಲಾ ವಿಭಾಗದಲ್ಲಿ ಪ್ರಜ್ವಲ್ ಆರ್ (546) ಅಂಕ ಪಡೆದಿದ್ದಾನೆ. ಕನ್ನಡ ವಿಷಯದಲ್ಲಿ 9, ಇಂಗ್ಲಿಷ್ನಲ್ಲಿ ಒಬ್ಬರು, ಭೌತಶಾಸ್ತ್ರದಲ್ಲಿ ಇಬ್ಬರು, ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ತಲಾ ಐವರು, ವ್ಯವಹಾರ ಅಧ್ಯಯನದಲ್ಲಿ ಮೂವರು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿರುತ್ತಾರೆ. ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಫಲಿತಾಂಶ ತರಲು ಶ್ರಮಿಸಿದ ಉಪನ್ಯಾಸಕರನ್ನು ಕಾಲೇಜಿನ ಕಾರ್ಯದರ್ಶಿ ಎಂ.ಪ್ರಕಾಶ್ ಅಭಿನಂದಿಸಿದ್ದಾರೆ.

ಸೆಂಟ್ ನಾರ್ಬಟ್ ಕಾಲೇಜು : ತಾಲ್ಲೂಕಿನ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿರುವ ಸಂತ ನೋರ್ಬರ್ಟ್ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ. 100 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 98.3 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದ 73 ವಿದ್ಯಾರ್ಥಿಗಳಲ್ಲಿ 40 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 33 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದ 26 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ , 21 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಶಿಲ್ಪಶ್ರೀ ಪಿ.ವಿ. ವಿಜ್ಞಾನ ವಿಭಾಗ 587 (ಶೇ 97.83), ಜುನೈದ್ ಆಹಮದ್ 589 ಪಿಸಿಎಂಸಿ ವಿಜ್ಞಾನ ಹಾಗೂ ಭೂಮಿಕಾ ವಾಣಿಜ್ಯ ವಿಭಾಗದಲ್ಲಿ 590 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕನ್ನಡ ವಿಷಯದಲ್ಲಿ 15 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಗಣಿತದಲ್ಲಿ 6, ಭೌತಶಾಸ್ತ್ರ 2, ಅರ್ಥಶಾಸ್ತ್ರದಲ್ಲಿ 6, ವ್ಯವಹಾರ ಅಧ್ಯಯನ 3, ಗಣಕ ವಿಜ್ಞಾನದಲ್ಲಿ 4, ಲೆಕ್ಕಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ ಶೇ 100 ರಷ್ಟು ಅಂಕ ಪಡೆದಿದ್ದಾರೆ. ಕಾಲೇಜಿನ ವ್ಯವಸ್ಥಾಪಕ ಫಾದರ್ ಬೆನ್ನಿ ಥಾಮಸ್ , ಖಜಾಂಚಿ ಫಾದರ್ ರೆನಿನ್ ಸೆಬಾಸ್ಟಿಯನ್, ಪ್ರಾಂಶುಪಾಲೆ ಲಿಶಾ ಫರ್ಜಾನರವರು ಮತ್ತು ಉಪನ್ಯಾಸಕರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-38-2022732614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.