ಕೊಟ್ಟೂರು (ವಿಜಯನಗರ ಜಿಲ್ಲೆ): ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 10 ವರ್ಷಗಳಿಂದ ಪ್ರಥಮ ರ್ಯಾಂಕ್ ತನ್ನಲ್ಲೇ ಉಳಿಸಿಕೊಂಡು ಬಂದಿದ್ದ ಪಟ್ಟಣದ ‘ಇಂದು’ ಕಾಲೇಜ್, ಈ ಬಾರಿಯೂ ಅದನ್ನು ಸಾಧಿಸುವ ಮೂಲಕ ಸತತ 11 ವರ್ಷಗಳಿಂದ ತನ್ನ ಹಿರಿಮೆಯನ್ನು ಮೆರೆದಿದೆ. ಜತೆಗೆ ಇಲ್ಲಿ ಬಾಲಕಿಯರೇ ರ್ಯಾಂಕ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಈ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದ ಬದಲು ಸಂಸ್ಕ್ರತ ಹಾಗೂ ಐಚ್ಛಿಕ ಕನ್ನಡ ವಿಷಯಗಳನ್ನೊಳಗೊಂಡ ಸಂಯೋಜನೆ ಇರುವುದು ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಸಹಕಾರಿಯಾಗಿದೆ. 16 ವರ್ಷಗಳ ಇತಿಹಾಸ ಇರುವ ಈ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯವಿಲ್ಲದ ಕಾರಣ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ ಎಂದು ಶಿಕ್ಷಣ ತಜ್ಞರು ಅಂದಾಜಿಸಿದ್ದಾರೆ.

‘ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಕೌಶಲಭರಿತ ಪಾಠ ಹಾಗೂ ಪಾಲಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಎಚ್.ಎನ್.ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

‘ಪ್ರತಿ ವರ್ಷ ರ್ಯಾಂಕ್ ಬರುವುದರಿಂದ ರಾಜ್ಯದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಬಯಸುತ್ತಾರೆ. ಉತ್ತಮ ಹಾಸ್ಟೆಲ್ ಸೌಲಭ್ಯ ಇದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗು ತ್ತಿದೆ. ಹೀಗಾಗಿ ಉತ್ತಮ ಫಲಿತಾಂಶ ಬರುತ್ತಿದೆ. ಇಲ್ಲಿ ಕಲಿತ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ಗ್ರಾಮ ಲೆಕ್ಕಿಗರು ಹಾಗೂ ಇತರ ಹಲವು ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ’ ಎಂದು ಅವರು ಹೇಳಿದರು.

ಈ ಬಾರಿಯ ವಿಶೇಷವೆಂದರೆ ಮೊದಲ 30 ಟಾಪರ್ಗಳ ಪಟ್ಟಿಯಲ್ಲಿ ಕಾಲೇಜಿನ 9 ವಿದ್ಯಾರ್ಥಿಗಳ ಹೆಸರು ಇದೆ. ಕಲಾ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿದ 10 ಟಾಪರ್ಗಳ ಪಟ್ಟಿಯಲ್ಲಿ ಕಾಲೇಜಿನ 23 ವಿದ್ಯಾರ್ಥಿಗಳ ಹೆಸರು ಇದೆ. ಕಳೆದ 11 ವರ್ಷಗಳಲ್ಲಿ ಹೀಗೆ ಟಾಪರ್ ಪಟ್ಟಿಯಲ್ಲಿ ಸೇರಿದ್ದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-2117466484

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.