ರಾಣೆಬೆನ್ನೂರು: ಅಧ್ಯಯನ ಒತ್ತಡ ಎದುರಿಸಲು ವಿದ್ಯಾರ್ಥಿಗಳು ಶಿಸ್ತು, ಸಮಯ ನಿರ್ವಹಣೆ ಮೊದಲಾದ ಕೌಶಲ ರೂಪಿಸಿಕೊಳ್ಳುವುದು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ ಹೇಳಿದರು.

ಇಲ್ಲಿನ ಹಲಗೇರಿ ರಸ್ತೆಯ ಬಿ.ಎ.ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಬುಧವಾರ ಕೆರಿಯರ್ ಗೈಡೆನ್ಸ್ ಪ್ಲೆಸ್ಮೆಂಟ್ ಕೋಶ ಹಾಗೂ ಕ್ಲಾಸಿಕ್ ಕೆ.ಎ.ಎಸ್, ಧಾರವಾಡ ಐ.ಎ.ಎಸ್.ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲು ಮತ್ತು ಅವಕಾಶಗಳು ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ರಾವ್ಸಾಬ್ ಪೂಜಾರ ಅವರು ಸರಿಯಾದ ಮಾರ್ಗದರ್ಶನ, ಸತತ ಪ್ರಯತ್ನ ಮತ್ತು ಸಕಾರಾತ್ಮಕ ಮನಸ್ಥಿತಿಯಿಂದ ಪ್ರತಿ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಸಾಧ್ಯ ಎಂದು ತಿಳಿಸಿದರು.

ಪ್ರಾಚಾರ್ಯ ಪ್ರೊ.ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ರಿಯವಾಗಿ ಆತ್ಮ ವಿಶ್ವಾಸದಿಂದ ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಇಂತಹ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರೊ.ದೇವರಾಜ ಹಂಚಿನಮನಿ, ಶೀವಲೀಲಾ ಮುಗದೂರ, ರೇಖಾ ಸಿ, ಕಾವ್ಯಾ ಆರ್.ಎಸ್. ರಾಜೀವ್ ಎಂ, ಪುಷ್ಪಾಂಜಲಿ ಕಾಂಬಳೆ, ಸಂತೋಷ ಭಜಂತ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-22-373276640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.