ಆಲಮಟ್ಟಿ: ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿಯ ಎಸ್ಎಸ್ಎಲ್ಸಿ ಫಲಿತಾಂಶ ತಪ್ಪಾಗಿ ನಮೂದಾಗಿದೆ.

ಗ್ರಾಮದ ವಿದ್ಯಾರ್ಥಿ ಸಂತೋಷ ರಾಘವೇಂದ್ರ ಖೇಡದ 2025-26ನೇ ಸಾಲಿನ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ 80ಕ್ಕೆ 66 ಅಂಕಗಳನ್ನು ಪಡೆದಿದ್ದಾರೆ ಎಂದು ಮೌಲ್ಯಮಾಪನ ಪತ್ರಿಕೆಯ ಪ್ರತಿ ಕೈಸೇರಿದಾಗ ತಿಳಿದು ಬಂದಿದೆ.

ಏ.23 ರಂದು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿ ವಿಜ್ಞಾನ ವಿಷಯದಲ್ಲಿ ಕೇವಲ 25 ಅಂಕ ಮಾತ್ರ ನಮೂದಾಗಿದೆ. ಇದರಿಂದ ತೀವ್ರವಾಗಿ ನೊಂದ ವಿದ್ಯಾರ್ಥಿ ಸಂತೋಷ ಅವರು ಉತ್ತರಪತ್ರಿಕೆ ಸಲ್ಲಿಸುವಂತೆ ಕೋರಿ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಉತ್ತರ ಪತ್ರಿಕೆಯಲ್ಲಿ ಮುಖಪುಟ ಅಂಕಗಳ ವಿವರಣೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಎಂದು ಮೂರು ವಿಭಾಗ ಇದೆ. ಮೂರು ವಿಭಾಗಕ್ಕೂ ಪ್ರತ್ಯೇಕ ಅಂಕ ಬರೆದು ಮೂರು ಕೂಡಿಸಿ ಒಟ್ಟಾರೆ ಅಂಕ ನಮೂದಿಸಬೇಕು. ಇಲ್ಲಿ ಮೌಲ್ಯಮಾಪಕರು ಅಕ್ಷರಗಳಲ್ಲಿ 66 ಅಂಕ ಅಂತ ಬರೆದಿದ್ದಾರೆ. ಆದರೆ ಗಣಕಯಂತ್ರದಲ್ಲಿ ನಮೂದಿಸುವಾಗ ಜೀವಶಾಸ್ತ್ರ ವಿಭಾಗದ ಅಂಕ 25 ಅಂತ ಮಾತ್ರ ನಮೂದಿಸಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಆನಂದ ಕಂಠಿ ತಿಳಿಸಿದರು.

66 ಅಂಕದ ಜತೆ ಆಂತರಿಕ ಮೌಲ್ಯಮಾಪನ 20 ಸೇರಿದರೆ ವಿಜ್ಞಾನಕ್ಕೆ ವಿದ್ಯಾರ್ಥಿ ಗಳಿಸಿದ ಅಂಕ 100 ಕ್ಕೆ 86 ಅಂಕ ಆಗುತ್ತದೆ. ಈಗ ಸಂತೋಷಗೆ ಆಂತರಿಕ ಅಂಕ ಸೇರಿ 45 ಅಂಕ ಬಂದಿವೆ. ಇನ್ನೂ 41 ಅಂಕ (ಶೇ 6.56) ಅಂಕಗಳು ಹೆಚ್ಚಿಗೆ ಬರಬೇಕು ಎಂದರು.‘ಮೌಲ್ಯಮಾಪಕರು ಮಾಡಿದ ಯಡವಟ್ಟಿನಿಂದ ನಾನು ಹೆಚ್ಚು ಅಂಕ ಪಡೆದರೂ ಕಡಿಮೆ ಅಂಕ ಪಡೆಯುವಂತಾಗಿದೆ. ತಕ್ಷಣವೇ ಪರೀಕ್ಷಾ ಮಂಡಳಿ ನನಗೆ ನ್ಯಾಯ ಒದಗಿಸಬೇಕು’ ಎಂದು ಸಂತೋಷ ಖೇಡದ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-26-240375011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.