ಅಳ್ನಾವರ: ಇಲ್ಲಿನ ಸೇಂಟ್ ತೆರೇಜಾ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಾಗೂ ಸಮೀಪದ ಬೆಣಚಿ ಗ್ರಾಮದ ಬಡ ರೈತ ಸಂತೋಷ್ ತುಕಾರಾಮ ಗಿರಿಯಪ್ಪನವರ ಮಗಳು ಮಹಾಲಕ್ಷ್ಮಿ ಸಂತೋಷ್ ಗಿರಿಯಪ್ಪನವರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 98.56 ಅಂಕ ಗಳಿಸಿದ್ದಾಳೆ.

ಸಂತೋಷ್ ತುಕಾರಾಮ ಅವರು ಬೆಣಚಿ ಗ್ರಾಮದಲ್ಲಿ ಎರಡು ಎಕರೆ ಹೊಲದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಬಡತನವನ್ನು ಲೆಕ್ಕಿಸದೆ ಸದಾ ಅಧ್ಯಯನ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಪ್ರಸಕ್ತ ಸಾಲಿನ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾಳೆ.

1 ರಿಂದ 5ನೇ ತರಗತಿ ವರೆಗೆ ಬೆಣಚಿಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಇವಳ ಪ್ರತಿಭೆ ಕಂಡು ಅವರ ಹತ್ತಿರದ ಸಂಬಂಧಿ ಅಳ್ನಾವರಕ್ಕೆ ಕರೆ ತಂದು ಸೇಂಟ್ ತೆರೇಜಾ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದರು.

ಇದೀಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ಪ್ರತಿ ವಿಷಯದಲ್ಲಿ 100 ಅಂಕ ಗಳಿಸಿದ್ದಾಳೆ.

ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಇವಳಿಗೆ ಧಾರವಾಡದ ಹಂಚಿನಮನಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ. ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾಳೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-24-111441718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.