ಅಂಕೋಲಾ: ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಟ್ಟಣದ ಪಿ.ಎಂ.ಹೈಸ್ಕೂಲಿನ ರೈತ ಭವನದಲ್ಲಿ ಕೊಂಕಣಿ ಖಾರ್ವಿ ಸಮಾಜದ ನೌಕರರ ಸಂಘವು ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಿತು.

ದಿನಕರ ವೇದಿಕೆಯ ಜಿಲ್ಲಾ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ, ಕೊಂಕಣಿ ಖಾರ್ವಿ ಸಮಾಜ ನೌಕರರ ಸಂಘದವರು ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನಿಯವಾಗಿದೆ. ಮಕ್ಕಳೇ, ಈ ಸನ್ಮಾನ ನಿಮ್ಮ ಕೊನೆಯ ಗುರಿಯಲ್ಲ. ಇದು ನಿಮ್ಮ ಮುಂದಿನ ದೊಡ್ಡ ಜಿಗಿತಕ್ಕೆ ಇಟ್ಟ ಮೊದಲ ಹೆಜ್ಜೆ. ಇನ್ನಷ್ಟು ಕಲಿಯಿರಿ, ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ಜಿ.ಆರ್. ತಾಂಡೇಲ ಮಾತನಾಡಿ, ನಮ್ಮ ಸಮಾಜದ ನೌಕರರೆಲ್ಲರೂ ಒಂದಾಗಿ, ಯುವಪೀಳಿಗೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹ ಎಂದು ಅವರು ಪ್ರಶಂಶಿಸಿದರು.

ಸುದರ್ಶನ, ಸಂತೋಷ ಕುಡ್ತಳಕರ, ರಮಾ ಖಾರ್ವಿ ಬೆಳಂಬಾರ, ನಾಗರಾಜ ಗಂಗಾವಳಿಕರ, ನಂದಾದೀಪ ತಾಂಡೇಲ, ಖಜಾಂಚಿ ತುಳಸಿದಾಸ ಕುಡ್ತಳಕರ, ನಾಗರಾಜ ಬಾನಾವಳಿಕರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-261299507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.