ಅಥಣಿ: ಸಾಧಿಸುವ ಛಲ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಇದ್ದಾಗ ಸಾಧನೆ ಸಾಧ್ಯ ಎಂಬುದನ್ನು ಕಟಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಬೀತು ಪಡಿಸಿದ್ದಾರೆ’ ಎಂದು ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಹೇಳಿದರು.

ಇಲ್ಲಿಯ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಚಂಡಕಿ ಜನಕಲ್ಯಾಣ ಶಿಕ್ಷಣ ಸಂಘ ಹಾಗೂ ಮಹೇಶ್ ಅಕಾಡೆಮಿ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ, ‘ಎಸ್ಎಸ್ಎಲ್ಸಿ’ ರಾಜ್ಯಮಟ್ಟದ ಟಾಪರ್ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಚಂಡಕಿ ಜನಕಲ್ಯಾಣ ಶಿಕ್ಷಣ ಸಂಘ, ಮಹೇಶ್ ಅಕಾಡೆಮಿಯ ಶಿಕ್ಷಕರು ಹಾಗೂ ತನ್ನ ಶಾಲೆಯ ಶಿಕ್ಷಕರ ಮಾರ್ಗದರ್ಶನ ಪಡೆದು ಪ್ರಾರ್ಥನಾ ಈ ಅಮೋಘ ಸಾಧನೆ ಮಾಡಿದ್ದಾಳೆ’ ಎಂದರು.

ಜಮಖಂಡಿ ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ವೈ.ವೈ. ಕೊಕ್ಕನವರ ಮಾತನಾಡಿದರು.

ತೇರದಾಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಮಗದುಮ್ಮ, ಪ್ರಾಧ್ಯಾಪಕ ಶಂಕರ ಕಮತಗಿ, ಮುಖ್ಯ ಶಿಕ್ಷಕ ತುಕಾರಾಮ ಬಾಗೇನ್ನವರ, ಕನ್ನಡಪರ ಹೋರಾಟಗಾರ ಶಬ್ಬೀರ್ ಸಾತಬಚ್ಚಿ, ಕಾನಿಪ ಸಂಘದ ಅಧ್ಯಕ್ಷ ರಾಕೇಶ್ ಮೈಗೂರ, ಶಿಕ್ಷಣ ಪ್ರೇಮಿ ವಿಠ್ಠಲ ಚಂಡಕಿ, ಶಿವಾನಂದ ಪಾಟೀಲ, ನಾಗಪ್ಪ ಬಿರಾದರ ಪಾಟೀಲ, ಅಮಿತ ಪುಕಾಳೆ, ರಮೇಶ್ ಇಂಗಳೆ, ಕೆಂಚಪ್ಪ ಚಂಡಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-710490520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.