ಬಾದಾಮಿ: ‘ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಬಾದಾಮಿ ತಾಲ್ಲೂಕು ಪ್ರಥಮ ಸ್ಥಾನ ಬಂದಿದ್ದು ಹೆಮ್ಮೆಯ ಸಂಗತಿ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ತಾಲ್ಲೂಕಿನ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಸಿಬ್ಬಂದಿ ಅಭಿನಂದನಾರ್ಹರು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದರು.

ಬಾದಾಮಿ ಪಟ್ಟಣದ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಜಿ.ಎನ್. ಖೋತ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಈಶ್ವರಿ ಹುಲ್ಲೂರ ಶೇ 99.36 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಖುಷಿಯ ಸಂಗತಿ’ ಎಂದು ಅವರು ಹೇಳಿದರು.

ಸಂಪ್ರೀತಾ ಗಾರವಾಡ ಶೇ 98.88 ದ್ವಿತೀಯ ಮತ್ತು ನಿಶ್ಚಿತಾ ಫತ್ತೇಪುರ 98.72 ತೃತೀಯ (ಆದರ್ಶ ವಿದ್ಯಾಲಯ ಚಿಕ್ಕಮುಚ್ಚಳಗುಡ್ಡ) ಸ್ಥಾನ ಪಡೆದಿದ್ದಾರೆ. ತಾಲ್ಲೂಕಿನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 4974 ವಿದ್ಯಾರ್ಥಿಗಳ ಪೈಕಿ 4813 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಬಾದಾಮಿ ತಾಲ್ಲೂಕಿಗೆ ಶೇ 96.74 ಫಲಿತಾಂಶ ಬಂದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ತಿಳಿಸಿದರು.

ಬಾದಾಮಿ: ‘ಶಾಲೆಯಲ್ಲಿ ಶಿಕ್ಷಕರು ಹೇಳಿದ ವಿಷಯವನ್ನು ಸರಿಯಾಗಿ ಕೇಳಿ, ಮನೆಯಲ್ಲಿ ಓದುತ್ತಿದ್ದೆ. ತಿಳಿಯದಿದ್ದರೆ ಶಿಕ್ಷಕರನ್ನು ಮತ್ತೆ ಕೇಳುತ್ತಿದ್ದೆ. ಅವರು ಸಮಸ್ಯೆಗೆ ಪರಿಹಾರ ಹೇಳುತ್ತಿದ್ದರು’ ಎಂದು ವಿದ್ಯಾರ್ಥಿನಿ ಈಶ್ವರಿ ಬಸವಂತಪ್ಪ ಹುಲ್ಲೂರ ತಿಳಿಸಿದರು.

‘ಪುಸ್ತಕದ ಕಡೆಗೆ ಒಲುವು ಹೆಚ್ಚು. ಯಾವುದೇ ಟ್ಯುಶನ್ಗೆ ಹೋಗುತ್ತಿರಲಿಲ್ಲ. ಶಾಲೆಯಲ್ಲಿಯೇ ಶಿಕ್ಷಕರು ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದರಿಂದ ಓದಲು ಸಹಾಯವಾಯಿತು. ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದಿ, ವೈದ್ಯೆಯಾಗುವ ಗುರಿಯಿದೆ’ ಎಂದರು.

‘ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ನಮಗೆ ಹೆಮ್ಮೆಯಾಗಿದೆ’ ಎಂದು ತಂದೆ ಬಸವರಾಜ, ತಾಯಿ ಪುಷ್ಪ ಮತ್ತು ಅಜ್ಜ ಈರಪ್ಪ ಸಂತಸ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-19-638891836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.