ಬೆಳಗಾವಿ: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 18ನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 23ನೇ ಸ್ಥಾನ ಲಭಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಬೆಳಗಾವಿ ಜಿಲ್ಲೆಗೆ 2024ರಲ್ಲಿ 29ನೇ ಸ್ಥಾನ, 2025ರಲ್ಲಿ 25ನೇ ಸ್ಥಾನ ಬಂದಿತ್ತು. ಈ ಬಾರಿ ವಿನೂತನ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಇಲಾಖೆ ಶ್ರಮ ಹಾಕಿದ್ದರಿಂದ ಏಳು ಸ್ಥಾನಗಳು ಮೇಲಕ್ಕೆ ಜಿಗಿದಿದೆ. ಅದೇ ರೀತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 2024ರಲ್ಲಿ 25ನೇ ಸ್ಥಾನ, 2026ರಲ್ಲಿ 26ನೇ ಸ್ಥಾನ ಬಂದಿತ್ತು. ಈ ಬಾರಿ ಮೂರು ಸ್ಥಾನ ಸುಧಾರಣೆ ಕಂಡಿದೆ.

ಬೆಳಗಾವಿ ಜಿಲ್ಲೆ ಮಾಹಿತಿ: ಪರೀಕ್ಷೆಗೆ ಹಾಜರಾಗಿದ್ದ 30,860 ವಿದ್ಯಾರ್ಥಿಗಳ ಪೈಕಿ 29,241 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 94.75ರಷ್ಟು ಫಲಿತಾಂಶ ಬಂದಿದೆ. 1,619 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ 80.48ರಷ್ಟಾಗಿತ್ತು. ಈ ಬಾರಿ ಶೇ 14.27ರಷ್ಟು ಸುಧಾರಣೆ ಕಂಡಿದೆ.

ತಾಲ್ಲೂಕುವಾರು: ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಕಿತ್ತೂರು ತಾಲ್ಲೂಕು ಈ ಬಾರಿಯೂ ಶೇ 97.05 ಫಲಿತಾಂಶದೊಂದಿಗೆ ಮತ್ತೆ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಖಾನಾಪುರ ಶೇ 95.94, ಸವದತ್ತಿ ಶೇ 95.77, ರಾಮದುರ್ಗ ಶೇ 95.30, ಬೆಳಗಾವಿ ಗ್ರಾಮೀಣ ಶೇ 94.67, ಬೈಲಹೊಂಗಲ ಶೇ 93.68, ಬೆಳಗಾವಿ ನಗರ ಶೇ 91.92 ಫಲಿತಾಂಶ ಪಡೆದಿವೆ. ಅಂದರೆ ಬೆಳಗಾವಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚು ಪಾಸಾಗಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ: 41,500 ವಿದ್ಯಾರ್ಥಿಗಳಲ್ಲಿ 29,049 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 2,451 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಶೇ 94.09ರಷ್ಟು ಫಲಿತಾಂಶ ಸಾಧನೆ ಮಾಡಿದೆ. ಕಳೆದ ಬಾರಿ ಶೇ 79.94 ದಾಖಲಾಗಿತ್ತು. ಶೇ 14.15 ಸುಧಾರಣೆ ಕಂಡಿದೆ.

ತಾಲ್ಲೂಕುವಾರು ಗಮನಿಸುವುದಾದರೆ; ನಿಪ್ಪಾಣಿ ಶೇ 95.88, ಕಾಗವಾಡ ಶೇ 95.68, ಮೂಡಲಗಿ ಶೇ 95.48, ಚಿಕ್ಕೋಡಿ ಶೇ 94.16, ಹುಕ್ಕೇರಿ ಶೇ 93.88, ರಾಯಬಾಗ ಶೇ 93.39, ಅಥಣಿ ಶೇ 93.19, ಗೋಕಾಕ ಶೇ 92.16 ಫಲಿತಾಂಶ ಪಡೆದಿವೆ.

ಈ ಜಿಲ್ಲೆಯಲ್ಲಿ ಕೂಡ ಗೋಕಾಕ ನಗರ ಹಾಗೂ ಚಿಕ್ಕೋಡಿ ನಗರಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ತೋರಿದ್ದಾರೆ.

ಮತ್ತೆ ಮೆರೆದ ಬಾಲಕಿಯರು: ಈ ಬಾರಿ ಕೂಡ ಫಲಿತಾಂಶದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಜಿಲ್ಲೆಯ ಒಟ್ಟು ಫಲಿತಾಂಶ ಏರಿಕೆಗೆ ಪ್ರಮುಖ ಕಾರಣರಾಗಿದ್ದಾರೆ. ಬಾಲಕರಿಗಿಂತ ಹೆಚ್ಚು ಉತ್ತೀರ್ಣ ಪ್ರಮಾಣ ದಾಖಲಿಸಿದ ವಿದ್ಯಾರ್ಥಿನಿಯರು ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ಬಾಲಕರು 15,068 ಮಕ್ಕಳಲ್ಲಿ 13,855 ಉತ್ತೀರ್ಣರಾಗಿದ್ದಾರೆ. 1213 ಫೇಲ್ ಆಗಿದ್ದಾರೆ. ಬಾಲಕರ ಫಲಿತಾಂಶ ಶೇ 91.95 ದಾಖಲಾಗಿದೆ. 15927 ಬಾಲಕಿಯರ ಪೈಕಿ 15,386 ಬಾಲಕಿಯರು ಉತ್ತೀರ್ಣರಾಗಿ 541 ವಿದ್ಯಾರ್ಥಿನಿಯರು ಫೇಲ್ ಆಗಿದ್ದಾರೆ. ಶೇ 96.60ರಷ್ಟು ಫಲಿತಾಂಶ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-21-759001464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.