ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿದ್ಯಾ ಟ್ರಸ್ಟ್ನ ವಿ.ಎಂ.ಕತ್ತಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ ಎಂದು ಅಧ್ಯಕ್ಷರೂ ಆದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ತಿಳಿಸಿದರು.

ವರದಿಗಾರರ ಜತೆ ಮಾತನಾಡಿದ ಅವರು, ಈ ವರ್ಷ ಪರೀಕ್ಷೆಗೆ ಕುಳಿತ ಒಟ್ಟು 110 ವಿದ್ಯಾರ್ಥಿಗಳ ಪೈಕಿ 110 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 32 ಉನ್ನತ ಶ್ರೇಣಿ, 69 ಪ್ರಥಮ, 3 ದ್ವಿತೀಯ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

‘ರಾಜ್ಯ ಸರ್ಕಾರ ‘ಹಿಂದಿ ವಿಷಯಕ್ಕೆ ಗ್ರೇಡ್’ ಎಂದು ಪರೀಕ್ಷೆ ವೇಳೆ ಘೋಷಣೆ ಮಾಡಿದ್ದರೂ ನಮ್ಮ ಶಾಲೆಯ 18 ವಿದ್ಯಾರ್ಥಿಗಳು ಹಿಂದಿಯಲ್ಲಿ 100 ಕ್ಕೆ 100 ಅಂಕ ಪಡೆದ್ದಾರೆ’ ಎಂದರು.

ಸೃಷ್ಟಿ ಸಿದ್ದಪ್ಪ ಹುಕ್ಕೇರಿ ಶೇ 97.44, ಸಂಜನಾ ಮಲ್ಲಪ್ಪ ದಂಡಿನವರ ಶೇ 97.28, ಭೂಮಿಕಾ ಸಿದ್ದಪ್ಪ ಎಡಿತ್ತನ್ನವರ ಶೇ 97.12 ಅಂಕಗಳೊಂದಿಗೆ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಸಂಸ್ಥೆಯ ಮಾರ್ಗದರ್ಶಕರಾದ ಪವನ್ ಕತ್ತಿ, ಪೃಥ್ವಿ ಕತ್ತಿ, ಮುಖ್ಯ ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-1464395241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.