ಭಾರತೀನಗರ: ‘ಪದವಿಯ ಅರ್ಹತೆಗಿಂತ ಬೌದ್ಧಿಕ ಜಾಣ್ಮೆಗೆ ಹೆಚ್ಚು ಮಾನ್ಯತೆ ಇದ್ದು, ವಿದ್ಯಾರ್ಥಿಗಳು ಅರ್ಹತೆಗಿಂತ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ನಿವೃತ್ತ ವಿಷಯ ಪರಿವೀಕ್ಷಕ ಸಿ.ಎಲ್.ನಂಜರಾಜು ಹೇಳಿದರು.

ಇಲ್ಲಿನ ಸಿರಿ ಕನ್ವೆನ್ಷನ್ ಹಾಲ್ನಲ್ಲಿ ಭಾರತ ವಿಕಾಸ ಪರಿಷದ್ ವತಿಯಿಂದ ನಡೆದ ಚಿಕ್ಕರಸಿನಕೆರೆ ಹೋಬಳಿಯ ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಜವಾಬ್ದಾರಿ ವಹಿಸಬೇಕು. ಅಲ್ಲದೆ ಸಂಸ್ಕಾರವಂತರಾಗಿ ರೂಪುಗೊಳ್ಳುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಭಾರತ ವಿಕಾಸ ಪರಿಷದ್ನ ಮೈಸೂರು ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ಮಾತನಾಡಿ, ‘ಭಾರತ ವಿಕಾಸ ಪರಿಷದ್ ಉತ್ತಮ ಶೈಕ್ಷಣಿಕ ಅರ್ಹತೆವುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ಭಾರತ ವಿಕಾಸ ಪರಿಷದ್ನ ಆಶಯಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಂತಾಗಬೇಕು’ ಎಂದು ಹೇಳಿದರು.

ಉದಯ್ ಆಪ್ಟಿಕಲ್ಸ್ ಮಾಲೀಕ ಬಾಬು ಕೃಷ್ಣ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀನಗರ ಬೌದ್ಧಯಾನ ಶಾಖಾ ಉಪಾಧ್ಯಕ್ಷ ಶಿವಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣ ಬೋರಯ್ಯ, ನಿವೃತ್ತ ಚಾಂಷುಗರ್ ನೌಕರ ಶೆಟ್ಟಹಳ್ಳಿ ಬೋರಯ್ಯ, ಭಾ.ವಿ.ಪ ಮಾಜಿ ಅಧ್ಯಕ್ಷರಾದ ದಾಸೇಗೌಡ, ನಂಜುಂಡೇಗೌಡ, ಪುಟ್ಟರಾಮ ರಾಜೇ ಅರಸು, ಎಸ್.ಟಿ.ನಂಜುಂಡೇಗೌಡ, ವೈ.ಜೆ.ಡಾ.ಸೌಮ್ಯ ಉಪಸ್ಥಿತರಿದ್ದರು.

ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಿಕ್ಕರಸಿನಕೆರೆ ಹೋಬಳಿಯ ನವ್ಯ, ಶ್ರೇಯ ರಮೇಶ್, ಕರ್ಣ, ಮನೀಶ್, ಸಿಂಚನ, ರಚನಾ, ತೇಜಸ್ ಗೌಡ, ಇಂದ್ರಜಿತ್, ಗಾನವಿ, ಮಾನ್ವಿತ, ಜೀವಿತ, ಕಾವ್ಯಶ್ರೀ ಸೇರಿದಂತೆ 25 ಮಂದಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-40-1530384824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.