ಬ್ರಹ್ಮಾವರ: ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಹಾಕಲಾಗುತ್ತಿರುವ ದಪ್ಪನೆಯ ವಾಟರ್ ಮಾರ್ಕ್ನಿಂದಾಗಿ ಅಕ್ಷರಗಳು ಕಾಣದೆ ಸಮಸ್ಯೆಯಾಗುತ್ತಿದೆ ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ.

ಪ್ರಶ್ನೆ ಪತ್ರಿಕೆಗಳ ನಕಲಿಗೆ ಅವಕಾಶ ದೊರಕಬಾರದು ಎನ್ನುವ ಉದ್ದೇಶಕ್ಕೆ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯು ಕೋಡ್ ಮಾದರಿಯ ಸಂಖ್ಯೆಯನ್ನು ವಾಟರ್ಮಾರ್ಕ್ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಹಾಕುತ್ತಿದೆ. ಈ ಸಂಖ್ಯೆಗಳದ ಪ್ರಶ್ನೆ ಪತ್ರಿಕೆಗಳ ಅಕ್ಷರಗಳು ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.

ಶನಿವಾರ ನಡೆದ ಗಣಿತ ಪರೀಕ್ಷೆಯಲ್ಲಿ ಸಂಖ್ಯೆಗಳೇ ಕಾಣದಂತೆ ವಾಟರ್ ಮಾರ್ಕ್ ಹಾಕಲಾಗಿದೆ. ಸಂಖ್ಯೆಗಳೇ ಕಾಣದಿದ್ದರೆ ಉತ್ತರ ಬರೆಯುವುದು ಹೇಗೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಕೂಡ ಇದೇ ಮಾದರಿಯಲ್ಲಿ ವಾಟರ್ ಮಾರ್ಕ್ ಹಾಕಲಾಗಿತ್ತು, ಈ ಬಾರಿ ಇನ್ನೂ ದಪ್ಪ ಅಕ್ಷರಗಳಲ್ಲಿ ಹಾಕಲಾಗಿದೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-28-1812936882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.