ಬ್ಯಾಡಗಿ: ‘ಶಾಲೆಯಲ್ಲಿ ಶಿಕ್ಷಕರ ಬೋಧನೆ ಹಾಗೂ ಅವರು ನೀಡುತ್ತಿದ್ದ ಮನೆಪಾಠವನ್ನು ಚಾಚೂತಪ್ಪದೇ ಮಾಡಿದ್ದರಿಂದಲೇ ಇಂದು ರ್ಯಾಂಕ್ ಬರಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಶಿಕ್ಷಕರ ಸೂಕ್ತ ಮಾರ್ಗದರ್ಶನದಲ್ಲಿ ಮುನ್ನಡೆದರೆ, ನಗರ ಪ್ರದೇಶದವರನ್ನೂ ಹಿಂದಿಕ್ಕಬಹುದು’.

ಇದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ ಅವರ ಮಾತು.

ಪರೀಕ್ಷೆಯ 625 ಅಂಕಗಳಿಗೆ 623 ಅಂಕಗಳನ್ನು (ಶೇ 99.68) ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿವೇದಿತಾ ಅವರಿಗೆ ಅಭಿನಂದನೆಯ ಮಾಹಾಪೂರವೇ ಹರಿದು ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಹ ಕರೆ ಮಾಡಿ ಅಭಿನಂದಿಸಿದ್ದಾರೆ.

ನಿವೇದಿತಾ ಅವರ ತಂದೆ ಪರಶುರಾಮ, ರೈತರು. ತಾಯಿ ಭಾರತಿ, ಗಾರ್ಮೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮಗೆ ಕಷ್ಟಗಳಿದ್ದರೂ ಅದನ್ನು ತೋರಿಸಿಕೊಳ್ಳದ ದಂಪತಿಯು ತಮ್ಮ ಹಿರಿಯ ಮಗಳನ್ನು ಓದಿಸಿ, ಎಂಜಿನಿಯರ್ ಓದಿಸುತ್ತಿದ್ದಾರೆ. ಈಗ ಕಿರಿ ಮಗಳು ನಿವೇದಿತಾ ಅವರಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ.

ಭಾಷಾ ವಿಷಯ ಸೇರಿದಂತೆ ಎಲ್ಲ ಐದೂ ವಿಷಯಗಳಲ್ಲಿ ನಿವೇದಿತಾ ಅವರು ಶೇ 100ರಷ್ಟು ಅಂಕ ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. ಅದರ ಮರು ಮೌಲ್ಯ ಮಾಪನಕ್ಕೂ ಅರ್ಜಿ ಹಾಕುವುದಾಗಿ ಅವರು ತಿಳಿಸಿದ್ದಾರೆ.

‘ವೈದ್ಯೆಯಾಗುವ ಆಸೆಯಿದೆ. ಅದಕ್ಕಾಗಿ ಇಂದಿನಿಂದಲೇ ತಯಾರಿ ಮಾಡುವೆ’ ಎಂದು ನಿವೇದಿತಾ ‘ಪ್ರಜಾವಾಣಿ‘ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-22-526385721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.